ಕಾಪು ಅಂಚೆ ಪ್ರಗತಿ ಪರಿಶೀಲನಾ ಸಭೆ
Thumbnail
ಕಾಪು : ಇಲ್ಲಿನ ವಿಭಾಗೀಯ ಉಪ ಅಂಚೆ ಕಚೇರಿಯಲ್ಲಿ ಅಂಚೆ ಪ್ರಗತಿ ಪರಿಶೀಲನಾ ಸಭೆಯು ನಡೆಯಿತು. ಉಡುಪಿ - ಕುಂದಾಪುರ ಉಪ ವಿಭಾಗಗಳ ಸಹಾಯಕ ಅಂಚೆ ಅಧೀಕ್ಷಕ ಕೃಷ್ಣರಾಜ ವಿಠ್ಠಲ ಭಟ್ ರವರು ಪ್ರಸಕ್ತ ವಿತ್ತೀಯ ವರ್ಷದಲ್ಲಿ ಕಾಪು ಹಾಗು ಅದರ ಶಾಖಾ ಅಂಚೆ ಕಚೇರಿಗಳು ಸಾರ್ವಜನಿಕರಿಗೆ ನೀಡುತ್ತಿರುವ ವಿವಿಧ ಜನ ಸ್ನೇಹಿ ಸೌಲಭ್ಯಗಳ ಮತ್ತು ಕ್ಲಪ್ತ ಕಾಲಕ್ಕೆ ಅಂಚೆ ಪತ್ರಗಳ ಬಟವಾಡೆಯ ಸಾಧನೆಯ ತುಲನಾತ್ಮಕ ಪರಿಶೀಲನಾ ಸಭೆ ನಡೆಸಿ, ಇನ್ನೂ ಹೆಚ್ಚಿನ ಜನರನ್ನು ಅಂಚೆ ಸೌಲಭ್ಯಗಳು ತಲಪುವಂತೆ ಕರೆ ನೀಡಿದರು. ಕಾಪು ಅಂಚೆ ಕಚೇರಿಯ ಎಲ್ಲಾ ಸಿಬ್ಬಂದಿ, ಕಳತ್ತೂರು ಅಂಚೆ ಪಾಲಕ ದಿವಾಕರ ಶೆಟ್ಟಿ, ಕಾಪು ಅಂಚೆ ಸಹಾಯಕರುಗಳಾದ ಪ್ರವೀಣ್ ಎರ್ಮಾಳು, ಶ್ರೀನಿವಾಸ್ ರಾವ್ ಪಣಿಯೂರು, ವಸಂತಿ ಎಸ್, ಮಜೂರು, ಮಲ್ಲಾರು, ಪಾದೂರು, ಉಳಿಯಾರಗೊಳಿ (ಕೈಪುಂಜಾಲು) ಶಾಖಾ ಅಂಚೆ ಪಾಲಕರು ಮತ್ತು ಸಹಾಯಕ ಅಂಚೆ ಪಾಲಕರು ಸಭೆಯಲ್ಲಿ ಭಾಗವಹಿಸಿದರು. ಅಂಚೆ ಪಾಲಕಿ ಯಶೋಧ ಕಾರ್ಯಕ್ರಮವನ್ನು ಆಯೋಜಿಸಿ, ನಿರ್ವಹಿಸಿದರು.
05 Dec 2024, 09:49 PM
Category: Kaup
Tags: