ಮಣಿಪಾಲ: ಮರ್ಡರ್ ಬಿಯರ್ ಬಾಟಲಿಯಿಂದ ಇರಿದು ಹತ್ಯೆ
Thumbnail
ಮಣಿಪಾಲ: ಲಕ್ಷ್ಮೀಂದ್ರನಗರದ ಬಳಿಯ ಮುಖ್ಯ ರಸ್ತೆಯ ಅನಂತ ಕಲ್ಯಾಣ ಮಾರ್ಗದಲ್ಲಿ ಹೊಟೇಲ್ ಕಾರ್ಮಿಕನನ್ನು ಬಿಯರ್ ಬಾಟಲಿಯಿಂದ ಚುಚ್ಚಿ ಹತ್ಯೆಗೈದ ಘಟನೆ ಶುಕ್ರವಾರ(ಡಿ.6) ನಡೆದಿದೆ. ಹತ್ಯೆಯಾದವನನ್ನು ಹೊನ್ನಾವರದ ಕಾಸಕೋಡು (ನಿವಾಸಿ ಶ್ರೀಧರ ನಾಯಕ) ಎಂದು ತಿಳಿದುಬಂದಿದೆ. ಘಟನೆ ಗುರುವಾರ ರಾತ್ರಿ ಆಗಿರುವ ಸಾಧ್ಯತೆ ಇದ್ದು. ಶುಕ್ರವಾರ ಬೆಳಗ್ಗೆ ವಾಯುವಿಹಾರಕ್ಕೆ ಹೋದಾಗ ಸ್ಥಳೀಯರ ಗಮನಕ್ಕೆ ಬಂದಿದೆ. ಸ್ಥಳಕ್ಕೆ ಎಸ್ಪಿ ಡಾ.ಅರುಣ್ ಕುಮಾರ್, ಮಣಿಪಾಲ ಇನ್ಸ್ ಪೆಕ್ಟರ್ ದೇವರಾಜ್, ಮಂಜುನಾಥ್ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.
06 Dec 2024, 11:14 AM
Category: Kaup
Tags: