ಮುಂಬೈ :14ನೇ ರಾಜ್ಯಮಟ್ಟದ ಓಪನ್ ಸೀ ಸ್ವಿಮ್ಮಿಂಗ್ ಸ್ಪರ್ಧೆಯಲ್ಲಿ ದಿಶಿತಾ ಚಂದ್ರಶೇಖರ್ ಗೆ ಫಿನಿಶರ್ ಪದಕ
ಮುಂಬೈ : ಸಿಂಧುದುರ್ಗ್ ಜಿಲ್ಲಾ ಅಕ್ವೆಟಿಕ್ ಅಸೋಸಿಯೇಷನ್ ಆಶ್ರಯದಲ್ಲಿ ಚಿವ್ಲ ಬೀಚ್ ಮಾಲವಣದಲ್ಲಿ ಜರುಗಿದ 14ನೇ ರಾಜ್ಯಮಟ್ಟದ ಓಪನ್ ಸೀ ಸ್ವಿಮ್ಮಿಂಗ್ ಸ್ಪರ್ಧೆಯಲ್ಲಿ ದಿಶಿತಾ ಚಂದ್ರಶೇಖರ್ ಫಿನಿಶರ್ ಪದಕ ಗಳಿಸಿರುತ್ತಾರೆ.
ಈಕೆ ಕಾಪುವಿನ ಮಡುಂಬು ಸಂಜೀವ ಪೂಜಾರಿಯವರ ಮೊಮ್ಮಗಳಾಗಿದ್ದು, ಚಂದ್ರಶೇಖರ್ ಮತ್ತು ಸವಿತಾ ದಂಪತಿಗಳ ಪುತ್ರಿಯಾಗಿದ್ದಾರೆ.
