ಅಂತರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ ಕೃಷ್ಣ ಮತ್ತು ಧನ್ತಿ
ಕಾಪು : ಬೈಂದೂರಿನಲ್ಲಿ ಜರಗಿದ ಅಂತರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಆನೆಗುಂದಿ ಶ್ರೀ ಸರಸ್ವತಿ ಪೀಠ ಸೂರ್ಯ ಚೈತನ್ಯ ಹೈಸ್ಕೂಲ್ ಕುತ್ಯಾರ್ ಇಲ್ಲಿನ ವಿದ್ಯಾರ್ಥಿ ಕೃಷ್ಣ ಇವರು ಕಟಾ ವಿಭಾಗದಲ್ಲಿ ಚಿನ್ನದ ಪದಕ ಹಾಗೂ ಕುಮಿಟೆ ವಿಭಾಗದಲ್ಲಿ ಚಿನ್ನದ ಪದಕ ಗಳಿಸಿದ್ದಾರೆ. ಇನ್ನೋರ್ವ ವಿದ್ಯಾರ್ಥಿನಿ ಕುಮಾರಿ ಧನ್ತಿ ಇವರು ಕುಮಿಟೆ ವಿಭಾಗದಲ್ಲಿ ಚಿನ್ನದ ಪದಕವನ್ನು ಗಳಿಸಿದ್ದಾರೆ.
ವಿದ್ಯಾರ್ಥಿ ಕೃಷ್ಣ, ಬೆಂಗಳೂರಿನ ರಮೇಶ್ ಆಚಾರ್ ಮತ್ತು ಕವಿತಾ ಎಸ್ ಆಚಾರ್ ಇವರ ಮಗನಾಗಿದ್ದು, 9ನೇ ತರಗತಿ ವಿದ್ಯಾರ್ಥಿ.
ಕುಮಾರಿ ಧನ್ತಿ, ಬೋಳ ಪದವಿನ ಸುರೇಶ್ ಮೂಲ್ಯ ಮತ್ತು ಅಮಿತಾ ದಂಪತಿಗಳ ಮಗಳು.
7ನೇ ತರಗತಿಯ ವಿದ್ಯಾರ್ಥಿನಿ.
