ಕಾಪು : ದಂಡತೀರ್ಥ ಕಾಲೇಜು ಸಂಸ್ಥಾಪಕ ದಿ. ಡಾll ಕೆ.ಪ್ರಭಾಕರ ಶೆಟ್ಟಿ ಪುಣ್ಯತಿಥಿ ಆಚರಣೆ
Thumbnail
ಕಾಪು : ಕಾಪು ದಂಡತೀರ್ಥ ಪದವಿ ಪೂರ್ವ ಕಾಲೇಜಿನ ಸಂಸ್ಥಾಪಕರಾದ ದಿ. ಡಾll ಕೆ.ಪ್ರಭಾಕರ ಶೆಟ್ಟಿ ಇವರ ಪುಣ್ಯತಿಥಿಯನ್ನು ಬುಧವಾರದಂದು ಕಾಲೇಜಿನಲ್ಲಿ ಆಚರಿಸಲಾಯಿತು. ಸಂಸ್ಥೆಯ ಸಂಚಾಲಕರಾದ ಡಾll ಕೆ.ಪ್ರಶಾಂತ್ ಶೆಟ್ಟಿಯವರು ಸಂಸ್ಥಾಪಕರ ಪುತ್ಥಳಿಗೆ ಮಾಲಾರ್ಪಣೆಗೈದರು. ಆಡಳಿತಾಧಿಕಾರಿ ಆಲ್ಬನ್ ರೊಡ್ರಿಗಸ್ ಮಾತನಾಡಿ, ದಿ. ಡಾ|| ಕೆ. ಪ್ರಭಾಕರ ಶೆಟ್ಟಿಯವರು ಕಾಪುವಿನ ಹಿರಿಯ ವೈದ್ಯರಾಗಿದ್ದು, ಧಾರ್ಮಿಕ, ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡಿದ್ದವರು. ಜೊತೆಗೆ ಶೈಕ್ಷಣಿಕವಾಗಿ ಪರಿಸರದ ಜನರಿಗೆ ವಿಜ್ಞಾನ ವಿಭಾಗದ ಪದವಿ ಪೂರ್ವ ಕಾಲೇಜನ್ನು ಸ್ಥಾಪಿಸಿ ಬಳಿಕ ಕಲಾ ಮತ್ತು ವಾಣಿಜ್ಯ ವಿಭಾಗವನ್ನಾಗಿ ಪರಿವರ್ತಿಸಿ, ಪ್ರತೀ ವರ್ಷ ಆರು ಲಕ್ಷದಷ್ಟು ವಿದ್ಯಾರ್ಥಿವೇತನವನ್ನು ಬಡ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನೀಡಿದ್ದಲ್ಲದೆ ಈ ವಿದ್ಯಾ ಸಂಸ್ಥೆಯನ್ನು ರಾಜ್ಯಮಟ್ಟದಲ್ಲಿ ಹೆಸರುವಾಸಿಯಾಗುವಂತೆ ಮಾಡಿದವರು. ಅವರ ಆದರ್ಶ ನಮಗೆಲ್ಲ ದಾರಿದೀಪವಾಗಬೇಕು ಹಾಗೂ ಅವರು ಕಟ್ಟಿ ಬೆಳೆಸಿದ ಈ ವಿದ್ಯಾಸಂಸ್ಥೆಯ ಪ್ರಗತಿಗೆ ನಾವೆಲ್ಲ ನಿರಂತರವಾಗಿ ತೊಡಗಿಸಿಕೊಳ್ಳಬೇಕೆಂದು ಹೇಳಿದರು. ಸಮಾರಂಭದಲ್ಲಿ ಕಾಲೇಜು ಪ್ರಾಂಶುಪಾಲ ನೀಲಾನಂದ ನಾಯ್ಕ್, ಶಿಕ್ಷಣ ಸಂಯೋಜಕ ಶಿವಣ್ಣ ಬಾಯರ್, ಪ್ರಾಥಮಿಕ ಶಾಲಾ ಮುಖ್ಯಸ್ಥರುಗಳಾದ ಗೇಬ್ರಿಯಲ್ ಫ್ರೇಂಕಿ ಮಸ್ಕರೇನ್ಹಸ್, ಕೃಪಾ ಅಮ್ಮನ್ನ, ಶಿಕ್ಷಕ-ಶಿಕ್ಷಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
15 Jan 2025, 08:56 PM
Category: Kaup
Tags: