ಶ್ರೀ ದೈವರಾಜ ಕೋರ್ದಬ್ಬು ದೈವಸ್ಥಾನ ಮೂಡುಕರೆ ಹೆಜಮಾಡಿ : ನೇಮೋತ್ಸವದ ಸಭೆ ; ನೂತನ ಸಮಿತಿ ರಚನೆ
ಪಡುಬಿದ್ರಿ : ಶ್ರೀ ದೈವರಾಜ ಕೋರ್ದಬ್ಬು ದೈವಸ್ಥಾನ ಮೂಡುಕರೆ ಹೆಜಮಾಡಿ ಇದರ ನೇಮೋತ್ಸದ ಕುರಿತ ಸಭೆಯು ಭಾನುವಾರ ದೈವಸ್ಥಾನದ ಪ್ರಾಂಗಣದಲ್ಲಿ ನಡೆಯಿತು.
ಹೆಜಮಾಡಿ ಗರಡಿ ಮನೆತನದ ಮುಖ್ಯಸ್ಥರಾದ ರವಿ ಶೆಟ್ಟಿ ಮುಂಬೈ ಇವರು ಅಧ್ಯಕ್ಷತೆ ವಹಿಸಿದ್ದರು.
ಸಭೆಯಲ್ಲಿ ದೈವಸ್ಥಾನದ ನೂತನ ಸಮಿತಿಯನ್ನು ರಚಿಸಿ, ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಗರಡಿ ಮನೆತನದ ರವೀಂದ್ರ ಶೆಟ್ಟಿಯವರನ್ನು ಸಮಿತಿಯ ಗೌರವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸುಧೀಶ್ ಶೆಟ್ಟಿ, ಮಹೇಶ್ ಶೆಟ್ಟಿ, ಸುರೇಶ್ ದೇವಾಡಿಗ, ರಾಧಾಕೃಷ್ಣ ಮಲ್ಯ, ಶ್ರೀನಿವಾಸ ಪೂಜಾರಿ ಹಾಗೂ ಮೂಡುಕರೆ ಗ್ರಾಮಸ್ಥರು ಹಾಗೂ ದೈವಸ್ಥಾನದ ಹತ್ತು ಸಮಸ್ತರು ಉಪಸ್ಥಿತರಿದ್ದರು.
