ಉಡುಪಿ : ಹುತಾತ್ಮ ಯೋಧರಿಗೆ ಗೌರವಾರ್ಪಣೆ
Thumbnail
ಉಡುಪಿ : ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಭಾರತೀಯ ಸೇನೆಯ ಮೇಲೆ ನಡೆದ ಅತ್ಯಂತ ಭೀಕರ ದಾಳಿಯಲ್ಲಿ 40 ಮಂದಿ ಹುತಾತ್ಮರಾದ ಯೋಧರಿಗೆ ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿಯವರ ನೇತೃತ್ವದಲ್ಲಿ ಹಾಗೂ ಭಾರತೀಯ ಅರೆ ಸೇನಾ ಪಡೆಯ ನಿವೃತ್ತ ಯೋಧರ ಸಂಘ ಉಡುಪಿ ಮತ್ತು ದಕ್ಷಿಣ ಜಿಲ್ಲೆಯ ವತಿಯಿಂದ ಉಡುಪಿ ಜಿಲ್ಲಾ ಯೋಧರ ಸ್ಮಾರಕದಲ್ಲಿ ಮೌನ ಪ್ರಾರ್ಥನೆಯ ಮೂಲಕ ಗೌರವ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ನಿವೃತ್ತ ಯೋಧರಾದ ಹೆಡ್ ಕಾನ್ಸ್ಟೇಬಲ್ ಸುರೇಶ್ ರಾವ್, ಸಿಪಿಒ ಜಯಾನಂದ ಪೂಜಾರಿ, ಹಲ್ವಾದರ್ ಶರತ್ ಕುಮಾರ್, ಎಸ್.ಐ.ಎಂ. ಪದ್ಮನಾಭ ರಾವ್, ಎಎಸ್‌ಐ ದಾಮೋದರ್, ಎಸ್.ಐ ಕೇಶವ ಆಚಾರ್ಯ, ಹವಲ್ಧಾರ್ ರಾಜೇಶ್ ಮೆಂಡನ್, ಸುಬೇದಾರ್ ಮೇಜರ್ ಗಣಪಯ್ಯ ಶೇರಿಗಾರ್, ಸಿ.ಎಸ್.ಎಲ್ ಪದ್ಮನಾಭ ಪೆರ್ಡೂರ್ ಹಾಗೂ ವಿಜಯ ಕುಂದರ್, ವೀಣಾ ಶೆಟ್ಟಿ, ಸುಧಾಕರ್ ಆಚಾರ್ಯ, ವಾರಿಜಾ ಕಲ್ಮಾಡಿ, ಶ್ವೇತ ಜಯರಾಮ್ ಉಪಸ್ಥಿತರಿದ್ದರು.
14 Feb 2025, 10:48 PM
Category: Kaup
Tags: