ಉಡುಪಿ ಜಿಲ್ಲಾ ನಾಯಕ ಸಂಘದ ನಿಯೋಗದಿಂದ ಲೋಕೋಪಯೋಗಿ ಸಚಿವರ ಭೇಟಿ
ಉಡುಪಿ : ಉಡುಪಿ ಜಿಲ್ಲಾ ಪರಿವಾರ ನಾಯಕ ಸಂಘದ ಅಧ್ಯಕ್ಷರಾದ ಬಾಲಕೃಷ್ಣ ನಾಯಕ ಇವರ ನೇತೃತ್ವದಲ್ಲಿ ಉಡುಪಿಗೆ ಭೇಟಿ ನೀಡಿದ ಕರ್ನಾಟಕ ಸರ್ಕಾರದ ಲೋಕೋಪಯೋಗಿ ಇಲಾಖೆಯ ಸಚಿವರಾದ ಸತೀಶ್ ಜಾರಕಿಹೊಳಿಯವರನ್ನು ಭೇಟಿಯಾಗಿ ನಾಯಕ ಸಮುದಾಯದ ಸಮಸ್ಯೆಗಳ ಕುರಿತು ಸಚಿವರ ಗಮನಕ್ಕೆ ತರಲಾಯಿತು.
ಉಡುಪಿ ಜಿಲ್ಲೆಗೆ ನಾಯಕ ಸಮುದಾಯಕ್ಕೆ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ನೀಡುವಂತೆ ವಿನಂತಿಸಲಾಯಿತು. ಸಚಿವರು ಬೇಡಿಕೆಗಳನ್ನು ಈಡೇರಿಸುವ ಭರವಸೆಯನ್ನು ನೀಡಿದರು.
ಸಚಿವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ನಂತರ ಜಿಲ್ಲಾ ಸಂಘದ ನಿಯೋಗವು ಸಚಿವರೊಂದಿಗೆ ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ಜಿಲ್ಲಾಧಿಕಾರಿಗೂ ಸಮಸ್ಯೆಗಳ ಕುರಿತು ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಸಂಘದ ಗೌರವ ಅದ್ಯಕ್ಷರಾದ ಶೇಖರ್ ನಾಯಕ, ಪ್ರಧಾನ ಕಾರ್ಯದರ್ಶಿ ಸತೀಶ್ ನಾಯಕ, ಸಂಘಟನಾ ಕಾರ್ಯದರ್ಶಿ ಸುಬ್ರಹ್ಮಣ್ಯ ನಾಯಕ, ಕಾಪು ತಾಲೂಕಿನ ಉಪಾಧ್ಯಕ್ಷರಾದ ಗೋಪಾಲ್ ನಾಯಕ ಕರಂದಾಡಿ, ಸಕ್ರಿಯ ಸದಸ್ಯರಾದ ಸುರೇಶ್ ನಾಯಕ ಕಲ್ಯಾ-ಕಾಪು, ಜಿಲ್ಲಾ ಸಂಘಟನೆಯ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
