ಅಲ್ಪಸಂಖ್ಯಾತ ಕಾರ್ಯಕರ್ತರಿಗೆ ಸರ್ಕಾರ, ಪಕ್ಷದಲ್ಲಿ ಸೂಕ್ತ ಸ್ಥಾನ ಮಾನಕ್ಕಾಗಿ ಉಪಮುಖ್ಯಮಂತ್ರಿಗೆ ಮನವಿ
Thumbnail
ಕಾಪು : ಕೆಪಿಸಿಸಿ ರಾಜ್ಯಾದ್ಯಕ್ಷರು,ಕರ್ನಾಟಕ ಸರ್ಕಾರದ ಉಪ ಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ್ ರವರು ಉಡುಪಿ ಜಿಲ್ಲೆಗೆ ಆಗಮಿಸಿದ ಸಂಧರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಕಛೇರಿಗೆ ಭೇಟಿ ನೀಡಿದಾಗ ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ವತಿಯಿಂದ ಅಧ್ಯಕ್ಷರಾದ ಶರ್ಫುದ್ದೀನ್ ಶೇಖ್ ರವರ ನೇತೃತ್ವದಲ್ಲಿ ಜಿಲ್ಲೆಯ ಪಕ್ಷದ ಅಲ್ಪಸಂಖ್ಯಾತ ಕಾರ್ಯಕರ್ತರಿಗೆ ಸರ್ಕಾರದಲ್ಲಿ ಹಾಗೂ ಪಕ್ಷದಲ್ಲಿ ಸೂಕ್ತ ಸ್ಥಾನ ಮಾನ ನೀಡಬೇಕೆಂದು ಮನವಿ ನೀಡಲಾಯಿತು. ಈ ಸಂಧರ್ಭದಲ್ಲಿ ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ, ಮಂಜುನಾಥ್ ಭಂಡಾರಿ, ಜಯಪ್ರಕಾಶ್ ಹೆಗ್ಡೆ, ಅಶೋಕ್ ಕುಮಾರ್ ಕೊಡವೂರು, ಎಂ ಎ ಗಫೂರ್, ಅಲ್ಪಸಂಖ್ಯಾತರ ಘಟಕದ ನಾಯಕರಾದ ಇಸ್ಮಾಯಿಲ್ ಆತ್ರಾಡಿ, ವಹೀದ್ ಶೇಖ್, ಯು ಎಂ ಫಾರೂಕ್ ಚಂದ್ರನಗರ, ಹಬೀಬ್ ಆಲಿ, ಪ್ರಶಾಂತ್ ಜತ್ತನ್ನ, ವಿಲ್ಸನ್, ನಿಯಾಜ್, ರಿಯಾಜ್, ಫೈಝಲ್ ಮತ್ತಿತರರು ಉಪಸ್ಥಿತರಿದ್ದರು.
02 Mar 2025, 04:06 PM
Category: Kaup
Tags: