ಭಾರತದ ಟಿ20 ಕ್ರಿಕೆಟ್ ತಂಡದ ನಾಯಕ ಸೂರ್ಯಕುಮಾರ್ ಯಾದವ್ ದಂಪತಿ ಕಾಪು ಶ್ರೀ ಹೊಸ ಮಾರಿಗುಡಿಗೆ ಭೇಟಿ
ಕಾಪು : ಭಾರತ ಟಿ20 ಕ್ರಿಕೆಟ್ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಅವರ ಪತ್ನಿ
ಕಾಪು ಮೂಲದ ದೇವಿಷಾ ಶೆಟ್ಟಿ ಅವರು ರವಿವಾರ ಕಾಪು ಶ್ರೀ ಹೊಸ ಮಾರಿಗುಡಿಗೆ ಭೇಟಿ ನೀಡಿದರು.
ಈ ಸಂದರ್ಭ ಮಾತನಾಡಿದ ಸೂರ್ಯಕುಮಾರ್ ಯಾದವ್, ಕಳೆದ ಬಾರಿ ಜುಲೈನಲ್ಲಿ ದೇವಳಕ್ಕೆ ಬಂದಾಗ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿತ್ತು. ಅಂದು ದೇವಳದ ಅರ್ಚಕರು ಟಿ20 ಕ್ಯಾಪ್ಟನ್ ಆಗಬೇಕು ಎಂದು ಪ್ರಸಾದ ನೀಡಿ ಆಶೀರ್ವದಿಸಿದ್ದರು. ಈಗ ತಂಡದ ನಾಯಕನಾಗಿದ್ದೇನೆ. ದೇವಸ್ಥಾನ ಭೇಟಿ ಖುಷಿ ನೀಡಿದೆ. ಇವತ್ತು ಅಮ್ಮನ ಬಳಿ ಏನೂ ಕೇಳಲಿಲ್ಲ. ಧನ್ಯವಾದ ಹೇಳಲು ಬಂದಿದ್ದೇನೆ ಎಂದರು.
ಈ ಸಂದರ್ಭ ಕಾಪು ಶ್ರೀ ಹೊಸ ಮಾರಿಗುಡಿ ದೇವಳದ ಪ್ರಮುಖರು ಉಪಸ್ಥಿತರಿದ್ದರು.
