ಮಾತೃಭಾಷೆಯೇ ಇತರ ಭಾಷಾ ಕಲಿಕೆಯ ತಳಹದಿ : ಬಿ.ಪುಂಡಲೀಕ ಮರಾಠೆ ಶಿರ್ವ
ಶಿರ್ವ : ಶತಮಾನೋತ್ಸವ ಸಂಭ್ರಮದ ಹೊಸ್ತಿಲಲ್ಲಿರುವ ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರೀ ಹಿ.ಪ್ರಾ.ಶಾಲಾ ಶಿಕ್ಷಕ, ಪೋಷಕರ ಸಭೆ ಗುರುವಾರ ಜರಗಿತು.
ನಿವೃತ್ತ ಶಿಕ್ಷಕ ಬಿ.ಪುಂಡಲೀಕ ಮರಾಠೆ ಶಿರ್ವ ಮಾತನಾಡಿ, ಮನೆಯ ವಾತಾವರಣ, ಸಂಸ್ಕಾರ, ಪರಿಸರ ಮಗುವಿನ ಭವಿಷ್ಯದ ಮೇಲೆ ಪ್ರಭಾವ ಬೀರುತ್ತದೆ. 9 ವರ್ಷದ ಒಳಗೆ ಮಕ್ಕಳಿಗೆ ಕೊಡುವ ಬಾಲ್ಯದ ಸಂಸ್ಕಾರಯುಕ್ತ ಶಿಕ್ಷಣವೇ ಭವಿಷ್ಯದ ದಿಕ್ಸೂಚಿಯಾಗಿದೆ. ಪ್ರಾಥಮಿಕ ಶಾಲಾ ಶಿಕ್ಷಣ ವ್ಯಕ್ತಿಯ ಭವಿಷ್ಯದ ಭದ್ರ ಬುನಾದಿಯಾಗಿದೆ. ಮಗುವಿಗೆ ಆರಂಭದ ಶಿಕ್ಷಣ ಮಾತೃಭಾಷೆಯಲ್ಲಿಯೇ ನೀಡಬೇಕು. ಮಾತೃಭಾಷೆಯೇ ಇತರ ಭಾಷಾ ಕಲಿಕೆಯ ತಳಹದಿ ಎಂದರು.
ಸಭೆಯ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕರಾದ ರಾಮದಾಸ್ ಪ್ರಭು ವಹಿಸಿದ್ದರು.
ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಶಶಿಧರ ವಾಗ್ಲೆ, ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಉಮೇಶ ಪ್ರಭು ಪಾಲಮೆ, ಎಸ್‌ಡಿಎಮ್‌ಸಿ ಅಧ್ಯಕ್ಷ ರವೀಂದ್ರ ಪಾಟ್ಕರ್, ಶ್ರೀದೇವಳದ ಆಡಳಿತ ಮೊಕ್ತೇಸರ ಗಂಪದಬೈಲು ಜಯರಾಮ ಪ್ರಭು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಕಲಿಕಾ ಹಬ್ಬದ ಪ್ರಮಾಣಪತ್ರವನ್ನು ವಿತರಿಸಲಾಯಿತು. ಶಾಲಾ ಮುಖ್ಯ ಶಿಕ್ಷಕಿ ಸಂಗೀತಾ ಆರ್. ಪಾಟ್ಕರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಶಿಕ್ಷಕಿ ರೇಶ್ಮಾ ಪರಿಚಯಿಸಿದರು. ಶಿಕ್ಷಕಿ ಸುಮತಿ ಸಹಕರಿಸಿದರು. ಶಿಕ್ಷಕಿ ಶಾಲಿನಿ ಜಿ. ನಿರೂಪಿಸಿ, ಶಿಕ್ಷಕಿ ವಿನುತಾ ಆರ್. ವಂದಿಸಿದರು.
