ಕಾಪು ಜಮಾತೆ ಇಸ್ಲಾಂ ವತಿಯಿಂದ ಸೌಹಾರ್ದ ಸಂವಾದ
Thumbnail
ಕಾಪು : ಕಾಪು ಜಮಾತೆ ಇಸ್ಲಾಂ ವತಿಯಿಂದ ಕಾಪು ಕೊಂಬಗುಡ್ಡೆಯಲ್ಲಿ ರಂಜಾನ್ ಪ್ರಯುಕ್ತ ಸೌಹಾರ್ದ ಸಂವಾದವು ಅನ್ವರ್ ಆಲಿ ಇವರ ಗೃಹದಲ್ಲಿ ಬುಧವಾರ ಜರಗಿತು. ಜಮಾತೆ ಇಸ್ಲಾಂ ನಿಕಟಪೂರ್ವ ಜಿಲ್ಲಾಧ್ಯಕ್ಷ ಶಬೀರ್ ಮಾತನಾಡಿ, ರಂಜಾನ್ ಉಪವಾಸ ಹಸಿವನ್ನು ಅರಿಯುವುದರ ಜೊತೆಗೆ ಅಂಗಾಂಗಳನ್ನು ಹತೋಟಿಯಲ್ಲಿಡುವ ಉಪವಾಸವಾಗಿದೆ. ಇಂದು ಜಿಹಾದ್ ಬಹು ಚರ್ಚಿತ ವಿಷಯವಾಗಿದ್ದು, ನಿಜವಾದ ಅರ್ಥದಲ್ಲಿ ಜಿಹಾದ್ ನಮ್ಮೊಳಗಿನ ಆಂತರ್ಯದ ಸಂಘರ್ಷ. ಭಾರತ ಶಾಂತಿಯ ತೋಟ. ನಾವೆಲ್ಲರೂ ಸಹೋದರತ್ವದಲ್ಲಿ ಬಾಳಬೇಕಾಗಿದೆ ಎಂದರು. ವಾಗ್ಮಿ, ಸಂಸ್ಕೃತ ವಿದ್ವಾಂಸರಾದ ಡಾ.ಗಣೇಶ್ ಭಟ್ ಮಾತನಾಡಿ, ಪ್ರತಿ ಧರ್ಮದ ತಿರುಳು ಸಮಾನತೆಯಾಗಿದೆ. ವಸುದೈವ ಕುಟುಂಬಕಂ ಎನ್ನುವ ಭಾರತ ದೇಶದಲ್ಲಿ ಸರ್ವರೂ ಸಮಾನರು ಎಂದರು. ಈ ಸಂದರ್ಭ ಕಾಪು ಜಮಾತೆ ಇಸ್ಲಾಂ ಕಾಪು ತಾಲೂಕಿನ ಸ್ಥಾನೀಯ ಅಧ್ಯಕ್ಷ ಅನ್ವರ್ ಅಲಿ ಕುರಾನ್ ಪಠಿಸಿ ಸಂದೇಶ ನೀಡಿದರು. ಇದೇ ಸಂದರ್ಭ ಧಾರ್ಮಿಕ ಚಿಂತನೆಗಳ ಬಗೆಗೆ ಸಂವಾದವು ನಡೆಯಿತು. ಈ ಸಂದರ್ಭ ಪತ್ರಕರ್ತರಾದ ಬಾಲಕೃಷ್ಣ ಪೂಜಾರಿ, ಮಹಮ್ಮದ್ ಶಾರೂಕ್, ದೀಪಕ್ ಬೀರ, ಮಹಮ್ಮದ್ ಇಕ್ಬಾಲ್, ಪತ್ರಿಕಾ ವಿತರಕ ಅರುಣ್ ಕಾಮತ್, ಮಜೂರು ಗ್ರಾ.ಪಂ.ಸದಸ್ಯ ಭಾಸ್ಕರ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
20 Mar 2025, 11:53 AM
Category: Kaup
Tags: