ಎಸ್.ಸಿ, ಎಸ್.ಟಿ ಅಭ್ಯರ್ಥಿಗಳಿಗೆ ಉಚಿತ ಕೌಶಲ ತರಬೇತಿ :ಅರ್ಜಿ ಆಹ್ವಾನ
ಕಾರ್ಕಳ : ಕಾರ್ಕಳದ ಕಾಬೆಟ್ಟುವಿನಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಆವರಣದಲ್ಲಿರುವ ಕೆ.ಜಿ.ಟಿ.ಟಿ.ಐ ವಿಸ್ತರಣಾ ಕೇಂದ್ರದಲ್ಲಿ ವಿವಿಧ ಅಲ್ಪಾವಧಿ ಕೌಶಲ ತರಬೇತಿಗಳಿಗೆ ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ಪರಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಕಾರ್ಕಳದ ಅಥವಾ ಮಂಗಳೂರಿನಲ್ಲಿರುವ ಕೆ.ಜಿ.ಟಿ.ಟಿ.ಐ ಕಚೇರಿಯಿಂದ ಅರ್ಜಿ ಪಡೆದು ಉಚಿತ ತರಬೇತಿಗೆ ಹೆಸರನ್ನು ನೋಂದಾಯಿಸಬಹುದೆಂದು ಕೆ.ಜಿ.ಟಿ.ಟಿ.ಐ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 8258200451, 8277741731
