ಬಂಟಕಲ್ಲು : ಬಿ.ಸಿ ರೋಡು - ಪಾಂಬೂರು ರಸ್ತೆ ಅಫಘಾತ ತಿರುವು ಬಂಟಕಲ್ಲು ನಾಗರಿಕ ಸಮಿತಿಯಿಂದ ದುರಸ್ಥಿ
Thumbnail
ಶಿರ್ವ : ಬಂಟಕಲ್ಲು ಸಮೀಪದ ಬಿ.ಸಿ ರೋಡು - ಪಾಂಬೂರು ರಸ್ತೆಯಲ್ಲಿ ಅನೇಕ ಅಫಘಾತಗಳಿಗೆ ಕಾರಣವಾಗಿರುವ ರಸ್ತೆಯ ತಿರುವು ಮರಗಿಡಗಳು ರಸ್ತೆಗೆ ಚಾಚಿಕೊಂಡಿರುವುದು ವಾಹನ ಸವಾರರಿಗೆ ರಸ್ತೆಯ ಮುಂದೆ ಕಾಣದೆ ಇರುವುದು ಹಾಗೂ ರಸ್ತೆಯ ಬದಿಯಲ್ಲಿ ಸ್ಥಳವಿಲ್ಲದೆ ದೂಡ್ಡ ದೊಡ್ಡ ಹೊಂಡಗಳನ್ನು ತಪ್ಪಿಸಲು ವಾಹನ ಸವಾರರು ಬಲಭಾಗಕ್ಕೆ ವಾಹನ ಚಲಾಯಿಸುತ್ತಿದ್ದುದರಿಂದ ಆ ತಿರುವುನಲ್ಲಿ ಅನೇಕ ಅಫಘಾತಗಳು ನಡೆಯುತ್ತಿದ್ದವು. ಕಳೆದ ವಾರ ಅದೇ ತಿರುವುನಲ್ಲಿ ಬೈಕ್ ನಲ್ಲಿ ಸಂಚರಿಸುತ್ತಿದ್ದ ವ್ಯಕ್ತಿಯೊರ್ವರರಿಗೆ ವಿರುದ್ದ ದಿಕ್ಕಿನಿಂದ ಬಂದ ಕಾರು ಡಿಕ್ಕಿಹೊಡೆದು ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಅವರು ಮೃತಪಟ್ಟ ಅಘಾತದಿಂದ ಅವರ ತಾಯಿಯೂ ಮೃತಪಟ್ಟಿದ್ದರು. ಹೀಗೆ ಅಫಘಾತಗಳಿಗೆ ಕಾರಣವಾಗಿದ್ದ ಸದ್ರಿ ರಸ್ತೆ ತಿರುವನ್ನು ಬಂಟಕಲ್ಲು ನಾಗರಿಕ ಸೇವಾ ಸಮಿತಿಯವರು ಇಂದು ಜೆ.ಸಿ.ಬಿ ಬಳಸಿ ತಿರುವನ್ನು ದುರಸ್ಥಿ ಪಡಿಸಿದ್ದಾರೆ. ಹೊಂಡಗಳಿಗೆ ಮಣ್ಣು ತುಂಬಿಸಿ, ರಸ್ತೆಗೆ ಅಡ್ಡವಾಗಿದ್ದ ಮರದ ಗೆಲ್ಲುಗಳು, ಗಿಡ, ಪೊದೆಗಳನ್ನು ಕತ್ತರಿಸಿ ಸುಗಮ ಸಂಚಾರಕ್ಕೆ ದುರಸ್ಥಿಪಡಿಸಿ ವಾಹನ ಸವಾರರಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿರುತ್ತಾರೆ. ನಾಗರಿಕ ಸೇವಾ ಸಮಿತಿಯ ಈ ಕಾರ್ಯ ಸಾರ್ವಜನಿಕರ ಶ್ಲಾಘನೆಗೆ ಪಾತ್ರವಾಗಿದೆ. ಸದ್ರಿ ತಿರುವು ಅಫಘಾತಕ್ಕೆ ಕಾರಣವಾಗಬಹುದಾದ ತಿರುವು ಆಗಿರುವುದರಿಂದ ವಾಹನ ಸವಾರರು ಈ ಭಾಗದಲ್ಲಿ ನಿಧಾನವಾಗಿ ಸಂಚರಿಸುವಂತೆ ನಾಗರಿಕ ಸೇವಾ ಸಮಿತಿ ಅಧ್ಯಕ್ಷ ಕೆ ಆರ್ ಪಾಟ್ಕರ್ ತಿಳಿಸಿದ್ದಾರೆ. ನಾಗರಿಕ ಸಮಿತಿಯ ಉಮೇಶ್ ರಾವ್, ಪುಂಡಲೀಕ ಮರಾಠೆ, ವಿನ್ಸಂಟ್ ಕಸ್ತಲಿನೋ, ಡೇನಿಸ್ ಡಿಸೋಜಾ, ವೈಲೇಟ್ ಕಸ್ತಲಿನೋ, ಸ್ಥಳೀಯರಾದ ಸುಂದರ ಶೆಟ್ಟಿ, ಶಂಕರ ಶೆಟ್ಟಿ ಉಪಸ್ಥಿತರಿದ್ದರು.
30 Mar 2025, 04:33 PM
Category: Kaup
Tags: