ಎ.4 - 13 : ಕಾಪುವಿನಲ್ಲಿ ಹತ್ತು ದಿನದ ಪ್ರಾಣಾಯಾಮ - ಧ್ಯಾನದ ಉಚಿತ ಶಿಬಿರ
ಕಾಪು : ಧೀಶಕ್ತಿ ಜ್ಞಾನ ಯೋಗ ಶಿಬಿರ ಮಂಗಳೂರು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಕಾಪು ಮಂಡಲ ಇದರ ಆಶ್ರಯದಲ್ಲಿ
ಕಾಯಿಲೆ ಹಾಗೂ ದು:ಖ ರಹಿತವಾದ ಜೀವನಕ್ಕಾಗಿ ಹತ್ತು ದಿನದ ಪ್ರಾಣಾಯಾಮ - ಧ್ಯಾನದ ಉಚಿತ ಶಿಬಿರ ಎಪ್ರಿಲ್ 04 ಶುಕ್ರವಾರದಿಂದ ಎಪ್ರಿಲ್ 13 ರವಿವಾರ ತನಕ ಸಾಯಂಕಾಲ 06 ಗಂಟೆಯಿಂದ 8.30 ಗಂಟೆಯವರೆಗೆ ಕಾಪು ಕಾಳಿಕಾಂಬಾ ದೇವಸ್ಥಾನದ ಸಭಾಭಾವನದಲ್ಲಿ ನಡೆಯಲಿದೆ.
ವಯಸ್ಸು 10 ವರ್ಷ ದಾಟಿದವರು ಯಾರು ಕೂಡ ಭಾಗವಹಿಸಬಹುದು.
ಕುಟುಂಬ ಸಮೇತರಾಗಿ ಭಾಗವಹಿಸಿ ಆದಷ್ಟು ಮಕ್ಕಳು ಭಾಗವಹಿಸಿದರೆ ಅತೀ ಉತ್ತಮ, ವಿದ್ಯಾರ್ಥಿಗಳಿಗೆ ಅತೀ ಅವಶ್ಯವಿರುವ ತರಗತಿ. ಬಿಪಿ, ಶುಗರ್, ಮೈಗ್ರೇನ್ ನಂತಹ ಅನೇಕ ಕಾಯಿಲೆಗಳು ಕೇವಲ 10 ದಿನದಲ್ಲಿಯೇ ವಾಸಿಯಾಗುತ್ತದೆ ಮತ್ತಿತರ ಕಾಯಿಲೆಗಳು ನಿಯಂತ್ರಣಕ್ಕೆ ಬರುತ್ತದೆ. ಮಾನಸಿಕ ಖಿನ್ನತೆಗೆ ಒಳಗಾದವರಿಗೆ ಕೂಡ ಉತ್ತಮ ತರಗತಿ.
ನಮ್ಮನ್ನು ನಾವು ಅರ್ಥ ಮಾಡಿಕೊಳ್ಳುವ ತರಗತಿ.
ಈ ತರಗತಿಯಲ್ಲಿ ಚರ್ಮದ ಕಾಯಿಲೆಗಳು ಗುಣವಾದ ಉದಾಹರಣೆಗಳಿವೆ.
ನಮ್ಮ ಜೀವನ ಶೈಲಿಯನ್ನು ಬದಲಾಯಿಸುವ ತರಗತಿ.
ವ್ಯಾಪಾರ ವಹಿವಾಟುಗಳಿಗೆ ಕೂಡ ಈ ತರಗತಿಯಲ್ಲಿ ಲಾಭವಾಗಲಿದೆ.
ನೆಲದ ಮೇಲೆ ಕುಳಿತುಕೊಳ್ಳಲಾಗದವರಿಗೆ ಕುರ್ಚಿಯಲ್ಲಿ ಕುಳಿತುಕೊಳ್ಳವ ಅವಕಾಶವಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಸರು ನೋಂದಾಯಿಸಲು ಸಂಪರ್ಕಿಸಿ :
9845379440, 9242494317, 7026810880, 9663261694
