ಸ.ಪ.ಪೂ.ಕಾಲೇಜು ಪಲಿಮಾರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ
ಪಲಿಮಾರು : ಮಾ.1 ರಿಂದ 20 ರವರೆಗೆ ನಡೆದ ಪಿಯುಸಿ ಪರೀಕ್ಷೆಯಲ್ಲಿ ಸ.ಪ.ಪೂ.ಕಾಲೇಜು ಪಲಿಮಾರು ಶೇ.100 ಫಲಿತಾಂಶ ದಾಖಲಿಸಿದೆ.
ಕಲಾ ಮತ್ತು ವಾಣಿಜ್ಯ ವಿಭಾಗದಲ್ಲಿ ಹಾಜರಾದ ಒಟ್ಟು 17 ವಿದ್ಯಾರ್ಥಿಗಳಲ್ಲಿ 4 ಮಂದಿ ವಿಶಿಷ್ಟ ಶ್ರೇಣಿ, 10 ಮಂದಿ ಪ್ರಥಮ ಶ್ರೇಣಿ, 03 ಮಂದಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ 14 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅನನ್ಯ (570) ಶೇ.95 ಅಂಕ ಪಡೆದು ಪ್ರಥಮ, ಆಯಿಷತುಲ್ ಷಫಾ (567)ಶೇ.94.5 ಪಡೆದು ದ್ವಿತೀಯ, ಭವ್ಯ ಪೂಜಾರ್ತಿ (535) ಶೇ.89.17 ಪಡೆದು ತೃತೀಯ ಸ್ಥಾನಿಯಾಗಿದ್ದಾರೆ.
ಕಲಾ ವಿಭಾಗದಲ್ಲಿ 3 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ರಕ್ಷಿತಾ (444) ಶೇ.74 ಪ್ರಥಮ, ರೇಷ್ಮಾ (405)ಶೇ. 67.5 ದ್ವಿತೀಯ, ಪ್ರಜ್ವಲ್ ಎಸ್ ಸುವರ್ಣ (359) ಶೇ.60 ಪಡೆದು ತೃತೀಯ ಸ್ಥಾನಿಯಾಗಿದ್ದಾರೆ.
ಶೇ. 100 ಫಲಿತಾಂಶ ದಾಖಲಿಸಿದ ಕಾಲೇಜಿನ ವಿದ್ಯಾರ್ಥಿ ವೃಂದ, ಪ್ರಾಂಶುಪಾಲರನ್ನು ಮತ್ತು ಪ್ರಾಧ್ಯಾಪಕ ವೃಂದವನ್ನು ಕಾಲೇಜು ಅಭಿವೃದ್ಧಿ ಸಮಿತಿ ಅಭಿನಂದಿಸಿದೆ.
