ಜೋಗಿಮನೆ ಟ್ರಸ್ಟ್ ತೆಂಕಬೆಟ್ಟು ಹಳಗೇರಿ, ಜೆ ಸಿ ಐ ಉಪ್ಪುಂದ : ಉಚಿತ ಯೋಗ ಶಿಬಿರ ಸಂಪನ್ನ
ಉಡುಪಿ : ಜೋಗಿಮನೆ ಟ್ರಸ್ಟ್ ತೆಂಕಬೆಟ್ಟು ಹಳಗೇರಿ ಹಾಗೂ ಜೆ ಸಿ ಐ ಉಪ್ಪುಂದ ಇವರ ಸಂಯುಕ್ತ ಆಶ್ರಯದಲ್ಲಿ ಎ.3ರಿಂದ 12ರವರೆಗೆ ಜರಗಿದ ಎರಡನೇ ವರ್ಷದ ಉಚಿತ ಯೋಗ ಶಿಬಿರದ ಸಮಾರೋಪ ಸಮಾರಂಭ ಜರಗಿತು.
ಮುಖ್ಯ ಅತಿಥಿಗಳಾಗಿ ಕುಂದಾಪುರ ಜೋಗಿ ಸಮಾಜದ ಅಧ್ಯಕ್ಷರು ಆಗಿರುವ ಎಚ್ಎಸ್ ರಮೇಶ್ ಜೋಗಿ ಹಾಗೂ ಸರಕಾರಿ ಆಯುಷ್ಕ ಹೆಚ್ಚಿಗೆ ಸಲಹೆದ ವೈದ್ಯಾಧಿಕಾರಿ ಆಗಿರುವಂತ ಡಾ. ವೀಣಾ ಕಾರನ್ ಆರೋಗ್ಯದ ಬಗ್ಗೆ ಮಾಹಿತಿಯನ್ನು ನೀಡಿದರು.
ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾಗಿರುವ ಗೋವಿಂದ ಬಿ ಹಾಗೂ ಶಿಕ್ಷಕರಾಗಿರುವ ಹರೀಶ್ ಜೋಗಿ ಹಾಗೂ ಜೋಗಿಮನೆ ಟ್ರಸ್ಟ್ ಇದರ ಅಧ್ಯಕ್ಷರಾದ ವಸಂತ್ ಜೋಗಿ ಕಾರ್ಯಕ್ರಮದ ಸಭಾ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದ ಕೇಂದ್ರ ಬಿಂದು ಆಗಿರುವ ಯೋಗ ಶಿಕ್ಷಕರಾಗಿರುವ ಮಂಜುನಾಥ್ ದೇವಾಡಿಗ ಇವರಿಗೆ ಟ್ರಸ್ಟ್ ಪರವಾಗಿ ಗುರುವಂದನೆ ಸಲ್ಲಿಸಲಾಯಿತು ಅಂತರಾಷ್ಟ್ರೀಯ ಯೋಗ ಪಟು ಧನ್ವಿ ಪೂಜಾರಿ ಮರವಂತೆ ಯೋಗ ಪ್ರದರ್ಶನ ನೀಡಿದರು. ಇವರನ್ನೂ ಕೂಡ ಟ್ರಸ್ಟ್ ಪರವಾಗಿ ಗೌರವಿಸಲಾಯಿತು.
ಕಾರ್ಯಕ್ರಮವನ್ನು ಸಂತೋಷ ನಾಗುರು ನಿರೂಪಿಸಿದರು. ಶ್ವೇತ ಜೋಗಿ ಸ್ವಾಗತಿಸಿ, ಸುರೇಶ್ ವಂದಿಸಿದರು.
