ಪಡುಬಿದ್ರಿ : ರಜಾ-ಮಜಾ -2025 ಶಿಬಿರದ ಉದ್ಘಾಟನೆ
ಪಡುಬಿದ್ರಿ : ಬಾಲ್ಯದಲ್ಲಿಯೇ ಮಕ್ಕಳ ಪ್ರತಿಭೆಯನ್ನು ಗುರುತಿಸಲು ರಜಾ ಮಜಾ ಶಿಬಿರಗಳು ಪೂರಕವಾಗಿದೆ. ಮಕ್ಕಳನ್ನು ಸಮಾಧಾನಪಡಿಸಲು ಭಯ ಮೂಡಿಸುವ ಕಾರ್ಯವನ್ನು ಮಾಡಿದರೆ ಮಕ್ಕಳ ಮನಸ್ಸಿಗೆ ತೊಂದರೆಯುಂಟಾಗಿ ಕ್ರಮೇಣ ಜೀವನದಲ್ಲಿ ಭಯವನ್ನು ಎದುರಿಸಲು ಅಶಕ್ತರಾಗಿರುತ್ತಾರೆ. ಆದ್ದರಿಂದ ಮಕ್ಕಳನ್ನು ಸದಾ ಕ್ರಿಯಾಶೀಲ ರಾಗುವಂತೆ ವಿವಿಧ ಚಟುವಟಿಕೆಗಳಲ್ಲಿ ಭಾಗಿಯಾಗುವಂತೆ ಮಾಡಬೇಕು ಎಂದು ಪಡುಬಿದ್ರಿ ಪೋಲಿಸ್ ಸಬ್ ಇನ್ಸ್‌ಪೆಕ್ಟರ್ ಪ್ರಸನ್ನ ಎಮ್ ಎಸ್ ಹೇಳಿದರು.
ಅವರು ಓಂಕಾರ ಕಲಾ ಸಂಗಮದ ವತಿಯಿಂದ ಅಯೋಜಿಸಿರುವ 4 ನೇ ವರ್ಷದ "ರಜಾ ಮಜಾ-2025" ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಇಂದಿನ ಮಕ್ಕಳ ಕೆಟ್ಟ ಆಹಾರ ಪದ್ದತಿಯಿಂದ ವಯೋ ಸಹಜವಾಗಿ ಬರುವ ಕಾಯಿಲೆಗಳು ಇವತ್ತು ಚಿಕ್ಕ ಮಕ್ಕಳಲ್ಲಿ ಕಾಣಿಸುತ್ತಿದೆ. ಆದ್ದರಿಂದ ಮಕ್ಕಳು ಆರೋಗ್ಯ ಯುಕ್ತ ಆಹಾರವನ್ನು ಮಾತ್ರ ಉಪಯೋಗಿಸ ಬೇಕು. ಮನಸ್ಸಿಗೆ ಜಾಸ್ತಿ ಒತ್ತಡ ಹೇರದೆ ಮಕ್ಕಳನ್ನು ಮಕ್ಕಳಂತೆ ಪೋಷಕರು ನೋಡಿಕೂಳ್ಳಬೇಕು ಎಂದು ಪ್ರಾಥಮಿಕ ಅರೋಗ್ಯ ಕೇಂದ್ರದ ವೃೆದ್ಯಾಧಿಕಾರಿ ಡಾ. ರಾಜಶ್ರಿ ಕಿಣಿ ಹೇಳಿದರು.
ಸನ್ಮಾನ : ಮುಖ್ಯಮಂತ್ರಿ ಪದಕ ಪುರಸ್ಕೃತರಾದ ಪಡುಬಿದ್ರಿ ಪೋಲಿಸ್ ಸಬ್ ಇನ್ಸ್‌ಪೆಕ್ಟರ್ ಪ್ರಸನ್ನ ಎಮ್. ಎಸ್ ರವರನ್ನು ಸನ್ಮಾನಿಸಲಾಯಿತು.
ರಜಾ ಮಜಾ ಶಿಬಿರದ ನಿರ್ದೇಶಕಿ ಗೀತಾ ಅರುಣ್ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ರಂಗಭೂಮಿ ಕಲಾವಿದ ರಾಮಾಂಜಿ ಉಡುಪಿ, ಪಡುಬಿದ್ರಿ ಗ್ರಾ.ಪಂ.ಮಾಜಿ ಉಪಾಧ್ಯಕ್ಷೆ ಯಶೋಧ ಪಡುಬಿದ್ರಿ, ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ (ರಿ.) ಕರ್ನಾಟಕ ರಾಜ್ಯಾಧ್ಯಕ್ಷ ರಚನ್ ಸಾಲ್ಯಾನ್, ಸಂಗೀತ ಕಲಾವಿದೆ ಬೇಬಿ ಸಾಂಚಿ, ಸಂಸ್ಥೆಯ ಪಾಲುದಾರರಾದ ಉದಯ ಕುಮಾರ್ ಭಟ್, ಅರುಣ್ ಕುಮಾರ್, ಅದ್ವಿತ್ ಕುಮಾರ್, ಉಪಸ್ಥಿತರಿದ್ದರು.
ರಜಾ ಮಜಾ ಶಿಬಿರದ ನಿರ್ದೇಶಕಿ ಗೀತಾ ಅರುಣ್ ಸ್ವಾಗತಿಸಿದರು. ಸಂತೋಷ್ ಪಡುಬಿದ್ರಿ ವಂದಿಸಿದರು. ದೀಪಾಶ್ರಿ ಕರ್ಕೇರ ನಿರೂಪಿಸಿದರು.
ಶಿಬಿರದಲ್ಲಿ ಸುಮಾರು 60 ವಿದ್ಯಾರ್ಥಿಗಳು ಭಾಗವಹಿಸಿದ್ದರು.
