ಉತ್ತಮ ಮಾತುಗಾರನಾಗ ಬೇಕಾದರೆ ಉತ್ತಮ ಕೇಳುಗನಾಗಿರಬೇಕು : ರಾಘವೇಂದ್ರ ಪ್ರಭು ಕವಾ೯ಲು
ಉಡುಪಿ : ಒಬ್ಬ ಉತ್ತಮ ಮಾತುಗಾರನಾಗ ಬೇಕಾದರೆ ಉತ್ತಮ ಕೇಳುಗನಾಗುವುದು ಅಷ್ಟೇ ಮುಖ್ಯ ಎಂದು ವ್ಯಕ್ತಿತ್ವ ವಿಕಸನ ತರಬೇತಿದಾರ ರಾಘವೇಂದ್ರ ಪ್ರಭು ಕವಾ೯ಲು ಹೇಳಿದರು.
ಅವರು ಅಜ್ಜರಕಾಡು ಪ್ರಜಾಪಿತ ಬ್ರಹ್ಮಾಕುಮಾರಿ ವಿಶ್ವವಿದ್ಯಾಲಯದಲ್ಲಿ ನಡೆದ ಮಕ್ಕಳ ಶಿಬಿರದಲ್ಲಿ ಮಾತನಾಡಿದರು.
ನಮ್ಮ ವ್ಯಕ್ತಿತ್ವ ವಿಕಸನದಲ್ಲಿ ಪರಿಣಾಮಕಾರಿ ಸಂವಹನ ಕೌಶಲ್ಯ ಅತೀ ಮುಖ್ಯವಾಗಿದೆ. ಇಂದು ಉತ್ತಮ ಭಾಷಣಕಾರರಿಗೆ ಸಮಾಜದಲ್ಲಿ ಬೇಡಿಕೆ ಇದೆ. ನಾವೆಲ್ಲರೂ ಸಂವಹನ ಕಲೆಯನ್ನು ಬೆಳೆಸಿಕೊಳ್ಳಬೇಕು ಎಂದರು.
ವಿದ್ಯಾಥಿ೯ಗಳು ಕೇವಲ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳಿಸುದ ರೊಂದಿಗೆ ವಿವಿಧ ರೀತಿಯ ಉತ್ತಮ ಹವ್ಯಾಸಗಳನ್ನು ರೂಢಿಸಬೇಕು ಎಂದರು.
ಈ ಸಂದಭ೯ದಲ್ಲಿ ಬಿ.ಕೆ ಸುಮಾ ಮತ್ತು ಕೇಂದ್ರದ ಪದಾಧಿಕಾರಿಗಳು ಉಪಸ್ಥಿತರಿದ್ದರು.
