ಕ್ಯಾಂಪಸ್ ಸೆಲೆಕ್ಷನ್ : ಶಿರ್ವ ಎಂ.ಎಸ್.ಆರ್.ಎಸ್ ಕಾಲೇಜಿನ 75 ವಿದ್ಯಾರ್ಥಿಗಳು ಆಯ್ಕೆ
Posted On:
21-05-2025 04:44PM
ಶಿರ್ವ : ಮೂಲ್ಕಿ ಸುಂದರ ರಾಮ್ ಶೆಟ್ಟಿ ಕಾಲೇಜು, ಶಿರ್ವ ಇಲ್ಲಿ ಅವಸರ್ ಎಚ್.ಆರ್ ಸರ್ವೀಸಸ್, ಬೆಂಗಳೂರು ಇವರು ನಡೆಸಿದ ಕ್ಯಾಂಪಸ್ ಪ್ಲೇಸ್‌ಮೆಂಟ್‌ನ ಸಂದರ್ಶನದಲ್ಲಿ ಬಿ.ಎ, ಬಿ.ಕಾಂ ಹಾಗೂ ಬಿ.ಸಿ.ಎ ವಿಭಾಗದ 75 ವಿದ್ಯಾರ್ಥಿಗಳು ಆಯ್ಕೆಯಾದರು.
ಅವಸರ್ ಎಚ್.ಆರ್ ಸರ್ವೀಸಸ್, ಬೆಂಗಳೂರು ಇದರ ನೇಮಕಾತಿ ಕಾರ್ಯ ನಿರ್ವಾಹಕ ನಿತೇಶ್ ಮೇಟಿ ಇವರು ಲಭ್ಯವಿರುವ ಉದ್ಯೋಗ ಅವಕಾಶಗಳ ಕುರಿತು ಅರಿವು ಮೂಡಿಸಿ, ವಿದ್ಯಾರ್ಥಿಗಳ ಸಂದರ್ಶನ ನಡೆಸಿ ಬದ್ಧತೆ ಹಾಗೂ ಕೌಶಲ್ಯ ಉದ್ಯೋಗದ ವ್ಯಾಪ್ತಿಯನ್ನು ಹಿಗ್ಗಿಸುತ್ತದೆ, ಎಲೆಕ್ಟಾçನಿಕ್ ಬಿಡಿ ಭಾಗಗಳನ್ನು ತಯಾರು ಮಾಡುವ ಬೃಹತ್ ಕಂಪೆನಿಗಳಾದ ಫಾಕ್ಸ್ಕಾನ್, ಟಾಟಾ ವಿಸ್ಟ್ರಾನ್, ಧೂತ್ ಒಳಗೊಂಡಂತೆ ಅಮೇಜಾನ್, ಫ್ಲಿಪ್‌ಕಾರ್ಟ್ನಂತಹ ಅಂತರ್ಜಾಲ ಗ್ರಾಹಕ ಸೇವಾ ಕ್ಷೇತ್ರಗಳಲ್ಲಿಯೂ ಕಾರ್ಯನಿರ್ವಹಿಸಲು ಅವಕಾಶಗಳು ಹೇರಳವಾಗಿವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಮಿಥುನ್ ಚಕ್ರವರ್ತಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸರಿಯಾದ ಸಮಯದಲ್ಲಿ ಸೂಕ್ತವಾದ ಉದ್ಯೋಗ ದೊರಕಿ ತನ್ಮೂಲಕ ಜೀವನ ಕಟ್ಟಿಕೊಳ್ಳುವ ಸೌಕರ್ಯ ಇಂದಿನ ದಿನಮಾನದಲ್ಲಿ ತುಂಬಾ ಅವಶ್ಯಕ. ಇಂತಹ ಒಂದು ಸಂದರ್ಭ ಕಾಲೇಜಿನಲ್ಲಿ ತೃತೀಯ ಪದವಿ ವಿದ್ಯಾರ್ಥಿಗಳಿಗೆ ದೊರಕಿರುವುದು ಸಂತಸ ತಂದಿದೆ ಎಂದರು.
ವೃತ್ತಿ ಮಾರ್ಗದರ್ಶನ ಮತ್ತು ಉದ್ಯೋಗ ಕೋಶದ ಸಂಯೋಜಕರುಗಳಾದ ಹೇಮಲತಾ ಶೆಟ್ಟಿ ಸ್ವಾಗತಿಸಿ, ರಶ್ಮಿ ವಂದಿಸಿದರು.