ಶಿರ್ವ ರೋಟರಿ : ಕೃತಜ್ಞತಾ ಸಮರ್ಪಣೆ, ಅಭಿನಂದನೆ, ಕುಟುಂಬ ಸಮ್ಮಿಲನ ಕಾರ್ಯಕ್ರಮ
Thumbnail
ಶಿರ್ವ : 55 ವರ್ಷಗಳ ಸೇವಾ ಇತಿಹಾಸ ಹೊಂದಿರುವ ಶಿರ್ವ ರೋಟರಿಯ 2024 -25ನೇ ಸೇವಾ ವರ್ಷದ ಕೃತಜ್ಞತಾ ಸಮರ್ಪಣೆ, ಅಭಿನಂದನೆ ಹಾಗೂ ಕುಟುಂಬ ಸಮ್ಮಿಲನದ ಕಾರ್ಯಕ್ರಮ ಶಿರ್ವ ರೋಟರಿ ಸಭಾ ಭವನ ಬಂಟಕಲ್ಲು ಇಲ್ಲಿ ಜರಗಿತು. ಶಿರ್ವ ರೋಟರಿ ಅಧ್ಯಕ್ಷ ಆಲ್ವಿನ್ ಅಮಿತ್ ಅರಾನ್ಹಾ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ 2024-25ನೇ ಸಾಲಿನಲ್ಲಿ ವಲಯ 5ರ ನೇತೃತ್ವ ವಹಿಸಿದ ಸಹಾಯಕ ಗವರ್ನರ್ ಅನಿಲ್ ಡೇಸಾ ಶಂಕರಪುರ, ವಲಯ ಸೇನಾನಿ ಮೆಲ್ವಿನ್ ಡಿಸೋಜ ಶಿರ್ವ ಹಾಗೂ ವಲಯ ತರಬೇತುದಾರ ಶೈಲೇಂದ್ರ ರಾವ್ ಕಾರ್ಕಳ ಇವರನ್ನು ಶಿರ್ವ ರೋಟರಿ ವತಿಯಿಂದ ವಲಯದ ಮಾಜಿ ಸಹಾಯ ಗವರ್ನರ್‌ಗಳಾದ ಬಿ.ಪುಂಡಲೀಕ ಮರಾಠೆ ಮತ್ತು ಡಾ.ಅರುಣ್‌ಕುಮಾರ್ ಹೆಗ್ಡೆ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಅಶ್ವಿನಿ ಅಮಿತ್ ಅರಾನ್ಹಾ, ಹಿರಿಯರಾದ ಹೆರಾಲ್ಡ್ ಕುಟಿನ್ಹೊ, ಮಾಜಿ ಅಧ್ಯಕ್ಷ ವಿಷ್ಣುಮೂರ್ತಿ ಸರಳಾಯ ವೇದಿಕೆಯಲ್ಲಿದ್ದರು. 2025-26ರ ನಿಯೋಜಿತ ಅಧ್ಯಕ್ಷ ವಿಲಿಯಮ್ ಮಚಾದೋ ಕಾರ್ಯಕ್ರಮ ನಿರೂಪಿಸಿದರು.
08 Jun 2025, 04:05 PM
Category: Kaup
Tags: