ಜೂ.13 -14 : ಮಥುರಾದಲ್ಲಿ ನಡೆಯಲಿರುವ ಅಖಿಲ ಭಾರತ ಸಂತ ಸಮಿತಿಯ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆ
Thumbnail
ಕಾಪು : ಉತ್ತರ ಪ್ರದೇಶ ಮಥುರಾದ ಶ್ರೀಧಾಮ ವೃಂದಾವನದಲ್ಲಿ ಜೂನ್ 13 ಮತ್ತು 14 ರಂದು ಅಖಿಲ ಭಾರತ ಸಂತ ಸಮಿತಿಯ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕಟಪಾಡಿಯ ಶ್ರೀ ಕ್ಷೇತ್ರ ಶಂಕರಪುರದ ಶ್ರೀ ಸಾಯಿ ಈಶ್ವರ್ ಗುರೂಜಿ ಭಾಗವಹಿಸಲಿದ್ದಾರೆ. ಈ ಸಭೆಯಲ್ಲಿ ಶ್ರೀ ಕೃಷ್ಣ ಜನ್ಮ ಭೂಮಿ ಮತ್ತು ಕಾಶಿ ಮುಕ್ತಿ ಹಾಗೂ ಯಾತ್ರಾ ಸ್ಥಳಗಳು ಮತ್ತು ಭವಿಷ್ಯದ ಏಳಿಗೆಗಳಿಗೆ ಭೌತಿಕ ಮತ್ತು ಆಧ್ಯಾತ್ಮಿಕ ಅಭಿವೃದ್ಧಿ, ಪಂಗಡದ ಅನಾನುಭವಿ ಸನ್ಯಾಸಿಗಳ ತರಬೇತಿಗಳ ಬಗ್ಗೆ ವಿಶೇಷ ಚರ್ಚೆ ನಡೆಯಲಿದೆ ಎಂದು ಮಠದ ಪ್ರಕಟಣೆ ತಿಳಿಸಿದೆ.
11 Jun 2025, 11:07 AM
Category: Kaup
Tags: