ಶ್ರೀದೇವಿ ಫ್ರೆಂಡ್ಸ್ ಮಲ್ಲಾರು ರಾಣ್ಯಕೇರಿ ಕಾಪು : ಉಚಿತ ಪುಸ್ತಕ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ
Thumbnail
ಕಾಪು : ಶ್ರೀದೇವಿ ಫ್ರೆಂಡ್ಸ್ ಮಲ್ಲಾರು ರಾಣ್ಯಕೇರಿ ಕಾಪು ಇವರ ನೇತೃತ್ವದಲ್ಲಿ ದಿ.ಕಾಪು ಲೀಲಾಧರ ಶೆಟ್ಟಿ ಇವರ ಸ್ಮರಣಾರ್ಥ ‌ರಾಣೆಯಾರ್ ಸಮಾಜದ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವು‌ ಕೋಟೆ ಶ್ರೀ ಹಳೇ ಮಾರಿಯಮ್ಮ ಸಭಾಂಗಣದಲ್ಲಿ ಜರಗಿತು. ಕಾರ್ಯಕ್ರಮವನ್ನು ಕೋಟೆ ಶ್ರೀ ಹಳೇ ಮಾರಿಯಮ್ಮ ‌ದೇವಸ್ಥಾನದ ಗುರಿಕಾರ ಜಯ ರಾಣ್ಯ‌ ಉದ್ಘಾಟಿಸಿದರು. ಮಲ್ಲಾರು ಜನರಲ್ ವಾರ್ಡಿನ ಸದಸ್ಯೆ ಮೋಹಿನಿ‌ ಶೆಟ್ಟಿ, ಸಮಾಜದ ಪ್ರಮುಖರಾದ ಶೇಖರ ಗೌಡ್ರು, ರವೀಂದ್ರ ಮಲ್ಲಾರು, ರಾಣೆಯರ್ ಸಮಾ‌ಜ ಸೇವಾ ಸಂಘ ಕಾಪು ಇದರ ಅಧ್ಯಕ್ಷರಾದ ನಾಗಾರ್ಜುನ‌ ಕಾಪು, ಹಳೇ ಮಾರಿಯಮ್ಮ ಮಹಿಳಾ ಮಂಡಳಿಯ ಅಧ್ಯಕ್ಷರಾದ ಕು.ಜ್ಞಾನೇಶ್ವರಿ, ಶ್ರೀದೇವಿ ಫ್ರೆಂಡ್ಸ್ ಅಧ್ಯಕ್ಷರಾದ ಅಖಿಲೇಶ್, ಉಪಾಧ್ಯಕ್ಷರಾದ ನೀತಾ ಉಪಸ್ಥಿತರಿದ್ದರು.
Additional image
12 Jun 2025, 04:16 PM
Category: Kaup
Tags: