ರೋಟರಿ ಕ್ಲಬ್ ಪಡುಬಿದ್ರಿ : ಅಧ್ಯಕ್ಷರಾಗಿ ಸುನಿಲ್ ಕುಮಾರ್, ತಂಡದ ಪದಗ್ರಹಣ
ಪಡುಬಿದ್ರಿ : ರೋಟರಿ ಕ್ಲಬ್ ಪಡುಬಿದ್ರಿ ಇದರ 25ನೇ ವರ್ಷದ 2025-26 ರ ಸಾಲಿನ ನೂತನ ಅಧ್ಯಕ್ಷರಾಗಿ ಸುನಿಲ್ ಕುಮಾರ್ ಹಾಗೂ ತಂಡದ ಪದಗ್ರಹಣ ಸಮಾರಂಭ ಪಡುಬಿದ್ರಿಯ ಸುಜಾತ ಅಡಿಟೋರಿಯಂನಲ್ಲಿ ಶನಿವಾರ ಜರಗಿತು.
ಪದಪ್ರಧಾನ ಅಧಿಕಾರಿಯಾಗಿದ್ದ ರೋ. ಎಮ್ ಜೆ ಡಿ, ಪಿಡಿಜಿ ಅಭಿನಂದನ್ ಎ. ಶೆಟ್ಟಿ ಪದಪ್ರಧಾನ ನಡೆಸಿ, ರೋಟರಿ ಸಂಸ್ಥೆಯು ಶಾಂತಿ, ಸೌಹಾರ್ದತೆ, ಸಹಬಾಳ್ವೆಯ ಪ್ರತೀಕವಾದ ಸಂಸ್ಥೆ. ಆಹಾರ, ಆರೋಗ್ಯ, ಶಿಕ್ಷಣದ ಬಗೆಗೂ ನಾವೆಲ್ಲ ಗಮನಹರಿಸಬೇಕು. ರೋಟರಿಯು ಸಮಾಜಮುಖಿ ಚಿಂತನೆಯನ್ನು ಮಾಡುವ ಸಂಸ್ಥೆಯಾಗಿದೆ ಎಂದರು.
2025-26ನೇ ಸಾಲಿನ ನೂತನ ಅಧ್ಯಕ್ಷರಾಗಿ ಸುನೀಲ್ ಕುಮಾರ್, ಪವನ್ ಸಾಲ್ಯಾನ್ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡರು.
ಸನ್ಮಾನ/ವಿದ್ಯಾರ್ಥಿವೇತನ ವಿತರಣೆ : ರೋ. ಎಮ್ ಜೆ ಡಿ, ಪಿಡಿಜಿ ಅಭಿನಂದನ್ ಎ. ಶೆಟ್ಟಿ,
ಚಂದ್ರ ಪೂಜಾರಿ, ಅನಿಲ್ ಡಿಸಿಲ್ವ, ಮೆಲ್ವಿನ್ ಡಿಸೋಜ, ಹೇಮಲತಾ ಸುವರ್ಣರವರನ್ನು ಸನ್ಮಾನಿಸಲಾಯಿತು.
ದಿ.ವೈ. ಹಿರಿಯಣ್ಣ ದಂಪತಿಗಳ ಸ್ಮರಣಾರ್ಥ ಅವರ ಪುತ್ರರಿಂದ ನೀಡಲ್ಪಟ್ಟ ರೋಲಿಂಗ್ ಶೀಲ್ಡನ್ನು
ಸತತ ನೂರು ಶೇಕಡ ಫಲಿತಾಂಶ ಪಡೆದ ಪಡುಬಿದ್ರಿ ಸಾಗರ್ ವಿದ್ಯಾಮಂದಿರ ಶಾಲೆಗೆ ನೀಡಿ ಗೌರವಿಸಲಾಯಿತು.
ದಿ. ಮಾಧವ ಆಚಾರ್ಯ ದಂಪತಿಗಳ ಸ್ಮರಣಾರ್ಥ ಅವರ ಸಂಬಂಧಿಕರಿಂದ ಎಸ್ಸೆಸ್ಸೆಲ್ಸಿಯಲ್ಲಿ ಗರಿಷ್ಠ ಅಂಕ ಪಡೆದ ಸೈಂಟ್ ಫ್ರಾನ್ಸಿಸ್ ಶಾಲೆ ಮುದರಂಗಡಿಯ ಸೌರಭ್ ರವರಿಗೆ
ವಿದ್ಯಾರ್ಥಿವೇತನ ಹಸ್ತಾಂತರಿಸಲಾಯಿತು.
ನೂತನ 25 ಸದಸ್ಯರು ಪಡುಬಿದ್ರಿ ರೋಟರಿ ಸಂಸ್ಥೆಗೆ ಸೇರ್ಪಡೆಗೊಂಡರು.
ಪತ್ರಕರ್ತ ಹಮೀದ್ ಪಡುಬಿದ್ರಿ ಸಂಪಾದಕತ್ವದಲ್ಲಿ ಮೂಡಿಬಂದ ಸದಸ್ಯರ ಮಾಹಿತಿ ಒಳಗೊಂಡ ಸ್ಪಂದನ ಮ್ಯಾಗಜೀನ್ ನ್ನು ರೋ. ವಿಜೇಶ್ ಶೆಣೈ ಬಿಡುಗಡೆಗೊಳಿಸಿದರು.
ಸ್ಥಾಪಕ ಅಧ್ಯಕ್ಷ ವೈ.ಸುಧೀರ್ ಕುಮಾರ್ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ನೂತನ ಅಧ್ಯಕ್ಷ ಸುನೀಲ್ ಕುಮಾರ್ ವಹಿಸಿದ್ದರು.
ಸ್ಥಾಪಕ ಅಧ್ಯಕ್ಷ ವೈ. ಸುಧೀರ್ ಕುಮಾರ್, ರೋಟರಿ ಪ್ರಮುಖರಾದ ವಿಜೇಶ್ ಶೆಣೈ, ಅನಿಲ್ ಡಿಸಿಲ್ವ, ಮೆಲ್ವಿನ್ ಡಿಸೋಜ, ಪವನ್ ಸಾಲ್ಯಾನ್, ನಿಕಟಪೂರ್ವ ಕಾರ್ಯದರ್ಶಿ ಹೇಮಲತಾ ಸುವರ್ಣ ಉಪಸ್ಥಿತರಿದ್ದರು.
ಶಿಕ್ಷಕ ಬಿ.ಎಸ್. ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.
