ಇನ್ನಂಜೆ ಎಸ್ ವಿ ಎಚ್ ಕಾಲೇಜು : ಕ್ರಿಕೆಟ್ ಪಿಚ್ ನಿರ್ಮಾಣ ಮತ್ತು ಆಟೋಟ ಸಾಮಗ್ರಿಗಳ ಹಸ್ತಾಂತರ
Posted On:
20-07-2025 05:05PM
ಕಾಪು : ರೋಟರಿ ಸಮುದಾಯದಳ ಇನ್ನಂಜೆ, ಯುವಕ ಮಂಡಲ (ರಿ.) ಇನ್ನಂಜೆ, ಇನ್ನಂಜೆ ಫ್ರೆಂಡ್ಸ್ ಇನ್ನಂಜೆ ಇದರ ವತಿಯಿಂದ ಇನ್ನಂಜೆ ಎಸ್ ವಿ ಎಚ್ ಕಾಲೇಜಿಗೆ ಸುಮಾರು 80,000 ವೆಚ್ಚದಲ್ಲಿ ಕ್ರಿಕೆಟ್ ಪಿಚ್ ನಿರ್ಮಾಣ ಮತ್ತು ಆಟೋಟ ಸಾಮಗ್ರಿಗಳನ್ನು ಹಸ್ತಾಂತರಿಸಲಾಯಿತು.
ಕಿಕ್ರೆಟ್ ಪಿಚ್ ಹಸ್ತಾಂತರ ಕಾರ್ಯಕ್ರಮವನ್ನು ರೋಟರಿ ಸಮುದಾಯ ದಳ ಇನ್ನಂಜೆ ಅಧ್ಯಕ್ಷರಾದ ವಜ್ರೇಶ್ ಆಚಾರ್ಯ, ರೋಟರಿ ಅಧ್ಯಕ್ಷರಾದ ಪ್ಯಾಟ್ರಿಕ್ ಡಿ ಸೋಜ, ಯುವಕ ಮಂಡಲ ಪೂರ್ವ ಅಧ್ಯಕ್ಷರಾದ ದೀವೇಶ್ ಶೆಟ್ಟಿ ಮತ್ತು ವಿಜಯ್ ಜಿ. ಇವರುಗಳು ಪ್ರಾಂಶುಪಾಲರಾದ ರಾಜೇಂದ್ರ ಪ್ರಭು ಇವರಿಗೆ ಹಸ್ತಾಂತರ ಮಾಡಿದರು.
ಈ ಸಂದರ್ಭದಲ್ಲಿ ಇನ್ನಂಜೆ ಪಂಚಾಯತ್ ಅಧ್ಯಕ್ಷರಾದ ಮಾಲಿನಿ ಇನ್ನಂಜೆ, ರೋ. ನವೀನ್ ಅಮೀನ್, ಕನ್ನಡ ಮಾಧ್ಯಮ ಮುಖ್ಯ್ಯೋಪಾದ್ಯಾಯರಾದ ನಟರಾಜ್ ಉಪಾಧ್ಯಾಯ, ದೈಹಿಕ ಶಿಕ್ಷಕರಾದ ನವೀನ್ ಶೆಟ್ಟಿ, ನಿವೃತ್ತ ಶಿಕ್ಷಕರಾದ ವಿಶ್ವನಾಥ್ ನಾಯ್ಕ್ ಪೇತ್ರಿ ಮತ್ತು ಆರ್ ಸಿ ಸಿ ಸದಸ್ಯರು, ಯುವಕ ಮಂಡಲ ಸದಸ್ಯರು, ಇನ್ನಂಜೆ ಫ್ರೆಂಡ್ಸ್ ಸದಸ್ಯರು ಉಪಸ್ಥಿತರಿದ್ದರು.