ಕಾಪು : ರೋಟರಿ ಸಮುದಾಯದಳ ಇನ್ನಂಜೆ ಇದರ ಪದಪ್ರಧಾನ ಸಮಾರಂಭವು ಇನ್ನಂಜೆ ಯುವಕ ಮಂಡಲದಲ್ಲಿ ಜರುಗಿತು.
ಪದ ಪ್ರಧಾನ ಅಧಿಕಾರಿಯಾಗಿ ರೋಟರಿ ಶಂಕರಪುರದ ಅಧ್ಯಕ್ಷರಾದ ಪ್ಯಾಟ್ರಿಕ್ ಡಿಸೋಜ ರೋಟರಿ ಸಮುದಾಯದಳ ಇನ್ನಂಜೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ವಜ್ರೇಶ್ ಆಚಾರ್ಯ ಇವರಿಗೆ ಪದ ಪ್ರಧಾನ ಮಾಡಿದರು.
ನೂತನ ಕಾರ್ಯದರ್ಶಿಯಾಗಿ ಗಣೇಶ್ ಆಚಾರ್ಯ, ದಂಡಪಾಣಿಯಾಗಿ ಜೇಸುದಾಸ್ ಸೋನ್ಸ್ ಇವರು ಅಧಿಕಾರ ಸ್ವೀಕರಿಸಿದರು.
ಈ ಸಂಧರ್ಭದಲ್ಲಿ ಇನ್ನಂಜೆ ಹಾಲು ಉತ್ಪಾದಕರ ಸಂಘ ಇದರ ಕಾರ್ಯನಿರ್ವಹಣಾಧಿಕಾರಿಯಾದ ಸುಬ್ರಮಣ್ಯ ಎನ್ ಭಟ್, ಅತಿಥಿಗಳಾಗಿ ರೋಟರೆಕ್ಟ್ ಜಿಲ್ಲಾ ಸಭಾಪತಿಯಾದ ನವೀನ್ ಅಮೀನ್, ರೋಟರಿ ಶಂಕರಪುರದ ಕಾರ್ಯದರ್ಶಿಯಾದ ಎದ್ವಿನ್ ನೋಯಲ್ ಡಿಸಿಲ್ವಾ, ಆರ್ ಸಿ ಸಿ ಸಭಾಪತಿಯಾದ ಮಾಲಿನಿ ಇನ್ನಂಜೆ, ಆರ್ ಸಿ ಸಿ ನಿಕಟ ಪೂರ್ವ ಅಧ್ಯಕ್ಷರಾದ ಪ್ರಶಾಂತ್ ಆಚಾರ್ಯ ಉಪಸ್ಥಿತರಿದ್ದರು.