ಎನ್ ಹೆಚ್ 66ರಲ್ಲಿ ಸರ್ವಿಸ್ ರಸ್ತೆ ನಿರ್ಮಾಣಕ್ಕಾಗಿ ಸಮಾಜ ಸೇವಕ ಕಾಪು ಜಯರಾಮ ಆಚಾರ್ಯ ಆಗ್ರಹ
ಕಾಪು : ರಾಷ್ಟ್ರೀಯ ಹೆದ್ದಾರಿ ಎನ್ ಹೆಚ್ 66 ರಲ್ಲಿ ಉಡುಪಿ ಜಿಲ್ಲೆಯ ಹೆಜಮಾಡಿಯಿಂದ ಬೈಂದೂರುವರೆಗೆ ಎರಡು ಬದಿಗಳಲ್ಲೂ ಸರ್ವಿಸ್ ರಸ್ತೆ ನಿರ್ಮಾಣ ಮಾಡಲು ಸಮಾಜ ಸೇವಕ ಕಾಪು ಜಯರಾಮ ಆಚಾರ್ಯರವರು ಉಡುಪಿ ಚಿಕ್ಕಮಗಳೂರು ಸಂಸದರಾದ ಕೋಟ ಶ್ರೀನಿವಾಸ ಪೂಜಾರಿಯವರಲ್ಲಿ ಮನವಿ ಮಾಡಿದ್ದಾರೆ.
ಉಡುಪಿ ಜಿಲ್ಲೆಯ ಕೆಲವು ಪ್ರದೇಶದಲ್ಲಿ ಸ್ಕೈವಾಕ್ ನಿರ್ಮಾಣ ಒಪ್ಪಿಗೆ, ಕೋಟೇಶ್ವರ, ಹೆಜಮಾಡಿ ಮದ್ದೆ 26 ಕಿ.ಮೀ ಸರ್ವಿಸ್ ರಸ್ತೆಗೆ ಅನುಮೋದನೆ ವಿಚಾರ ಕೇಳಿ ಸಂತೋಷವಾಯಿತು. ಆದರೆ ಎಲ್ಲೆಲ್ಲಿ ಅತೀ ಅವಶ್ಯಕಥೆ ಇದೆ ಅಲ್ಲಿ ಸರ್ವಿಸ್ ರಸ್ತೆ ನಿರ್ಮಾಣ ಮಾಡದೆ ಯಾದೃಚ್ಛಿಕ ಸರ್ವಿಸ್ ರಸ್ತೆ ನಿರ್ಮಾಣ ಮತ್ತು ಸ್ಕೈ ವಾಕ್ ವ್ಯವಸ್ಥೆ ಸರಿಯಲ್ಲ.
ಉಡುಪಿ ಜಿಲ್ಲೆಯ ಎರಡು ಬದಿಗಳಲ್ಲಿ ಸರ್ವಿಸ್ ರಸ್ತೆ ಅತಿ ಅಗತ್ಯವಾಗಿ ನಿರ್ಮಾಣವಾಗಬೇಕು, ಅಂತೆಯೇ ಪುರಸಭೆ, ತಾಲೂಕು ವ್ಯಾಪ್ತಿ ಮತ್ತು ಹೆಜಮಾಡಿಯಿಂದ ಬೈಂದೂರು ತನಕ ಸರ್ವಿಸ್ ರಸ್ತೆ ನಿರ್ಮಾಣವಾಗಲೇ ಬೇಕು. ಹಲವಾರು ಕಡೆ ಸರ್ವಿಸ್ ರಸ್ತೆ ಇಲ್ಲದೆ ಹಲವಾರು ಅಪಘಾತಗಳು ಈಗಾಗಲೇ ನಡೆದು ಹೋಗಿರುತ್ತದೆ. ಉಡುಪಿ ಜಿಲ್ಲೆಯ ಮಾನ್ಯ ಸಂಸದರು ಈ ಬಗ್ಗೆ ಪುನರ್ ಪರಿಶೀಲಿಸಿ ಎಲ್ಲಾ ಮಾನ್ಯ ಶಾಸಕರೊಂದಿಗೆ ಹಾಗೂ ಸ್ಥಳೀಯರೊಂದಿಗೆ ಚರ್ಚಿಸಿ ಉಡುಪಿ ಜಿಲ್ಲೆಯ ಎನ್ ಎಚ್ 66 ರ ಎರಡು ಬದಿಗಳಲ್ಲಿ ಸರ್ವಿಸ್ ರಸ್ತೆ ಆಗುವವರೆ ಪ್ರಯತ್ನಿಸಬೇಕೆಂದು ಆಗ್ರಹಿಸಿದ್ದಾರೆ.
