ಕರ್ನಾಟಕ ಸ್ಟೇಟ್ ಟೈಲರ್ಸ್ ವಲಯ ಸಮಿತಿ ಕಾಪು ಇದರ ಮಹಾಸಭೆ
ಕಾಪು : ಕರ್ನಾಟಕ ಸ್ಟೇಟ್ ಟೈಲರ್ಸ್ ವಲಯ ಸಮಿತಿ ಕಾಪು ಇದರ ಮಹಾಸಭೆಯು ಭಾಸ್ಕರ ಸೌಧ ಸಭಾಭವನ ಕಾಪು ಇಲ್ಲಿ ಕಾಪು ವಲಯ ಸಮಿತಿಯ ಅಧ್ಯಕ್ಷರಾದ ಸುರೇಖಾ ಶೈಲೇಶ್ ಇವರ ಅಧ್ಯಕ್ಷತೆಯಲ್ಲಿ ನೆರವೇರಿತು.
ಸಭೆಯಲ್ಲಿ 2025 -26ನೇ ಸಾಲಿನ ನೂತನವಾಗಿ ಕಾರ್ಯಕಾರಿ ಸಭೆಯನ್ನು ನೇಮಕ ಮಾಡಲಾಯಿತು. ಅಧ್ಯಕ್ಷರಾಗಿ ಸುಧಾಕರ್ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿಯಾಗಿ ರಮಣಿ ಆಚಾರ್ಯ, ಕೋಶಾಧಿಕಾರಿಯಾಗಿ ನರೇಂದ್ರ ಸಾಲಿಯಾನ್ ಹಾಗು ಉಪಾಧ್ಯಕ್ಷರಾಗಿ
ಶುಭಕರ್ ಕಾಪು ಹಾಗು ಜೊತೆ ಕಾರ್ಯದರ್ಶಿ ಯಾಗಿ ಆಶಾ ಆಚಾರ್ಯ ಇವರನ್ನು ನೇಮಕ ಮಾಡಲಾಯಿತು.
ಈ ಸಭೆಯಲ್ಲಿ ಜಿಲ್ಲಾ ಸಮಿತಿಯ ಉಪಾಧ್ಯಕ್ಷರಾದ ಬಿ ಕೆ ಶ್ರೀನಿವಾಸ್, ಕಾಪು ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ರಮಾನಂದ ಅತ್ತೂರು,
ಪ್ರಧಾನ ಕಾರ್ಯದರ್ಶಿ ದಿವಾಕರ್, ಸುರೇಶ್ ಶೆಟ್ಟಿಗಾರ್ ಮತ್ತು ಕಾಪು ವಲಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಫಯಾಜ್ ಕೋಶಾಧಿಕಾರಿ ಆಶಾ ಆಚಾರ್ಯ, ಉಪಾಧ್ಯಕ್ಷರಾದ ಕೃಷ್ಣ ಬಂಗೇರ ಹಾಗು ಕಾಪು ವಲಯ ಸಮಿತಿಯ ಮಾಜಿ ಅಧ್ಯಕ್ಷರಾದ ಮೋಹಿನಿ ಸುವರ್ಣ,
ಹಿರಿಯರಾದ ಕೃಷ್ಣಬಂಗೇರ ಉಪಸ್ಥಿತರಿದ್ದರು.
