ಜುಲೈ 27 : ಸುಶ್ಮಿ ಮೆಲೋಡಿಯಸ್ ಪಡುಬಿದ್ರಿ ವತಿಯಿಂದ ಕರೋಕೆ ಗಾಯನ ಸ್ಪರ್ಧೆ
Thumbnail
ಕಾಪು : ಗ್ರಾಮೀಣ ಪ್ರದೇಶದ ಉದಯೋನ್ಮುಖ ಸಂಗೀತ ಪ್ರತಿಭೆಗಳಿಗೆ ವೇದಿಕೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಸುಶ್ಮಿ ಮೆಲೋಡಿಯಸ್ ಪಡುಬಿದ್ರಿ ಇದರ ವತಿಯಿಂದ ಜುಲೈ 27 ರಂದು ದ.ಕ ಮತ್ತು ಉಡುಪಿ ಜಿಲ್ಲಾ ಮಟ್ಟದ ಕರೋಕೆ ಗಾಯನ ಸ್ಪರ್ಧೆ ಪಡುಬಿದ್ರಿ ಸುಜಾತಾ ಆಡಿಟೋರಿಯಂ ನಲ್ಲಿ ಜರಗಲಿದೆ ಎಂದು ಸುಶ್ಮಿ ಮೆಲೋಡಿಯಸ್‌ ಪಡುಬಿದ್ರಿ ಆಡಳಿತ ನಿರ್ದೇಶಕರಾದ ಸುಶ್ಮಿತಾ ಎರ್ಮಾಳ್ ಹೇಳಿದರು. ಅವರು ಕಾಪು ಪತ್ರಿಕಾ ಭವನದಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಕಾರ್ಯಕ್ರಮವನ್ನು ಪಡುಬಿದ್ರಿ ಬಂಟರ ಸಂಘದ ಮಾಜಿ ಅಧ್ಯಕ್ಷರಾದ ನವೀನಚಂದ್ರ ಜೆ ಶೆಟ್ಟಿ ಉದ್ಘಾಟಿಸಲಿದ್ದಾರೆ. ಚಲನಚಿತ್ರ ನಟರಾದ ಅನ್ವಿತಾ ಸಾಗರ್, ಸ್ವರಾಜ್ ಶೆಟ್ಟಿ ಹಾಗು ಗಜಾನನ ಕ್ರಿಕೆಟ್‌ರ್ಸ್ ಮತ್ತು ನತ್ತೆರಕೆರೆ ಚಲನಚಿತ್ರ ತಂಡದ ನಟ ನಟಿಯರು ಭಾಗವಹಿಸಲಿದ್ದಾರೆ. ಜುಲೈ 20 ರಂದು ನಡೆದ ಅಡಿಷನ್ ರೌಂಡ್ ನಲ್ಲಿ ದ.ಕ ಮತ್ತು ಉಡುಪಿ ಜಿಲ್ಲೆಯ ವಿವಿಧ ಕಡೆಗಳಿಂದ 64 ಸ್ಪರ್ಧಾಳು ಭಾಗವಹಿಸಿದ್ದರು. ಜುಲೈ 27 ರಂದು ನಡೆಯುವ ಅಂತಿಮ ಸುತ್ತಿಗೆ 25 ಸ್ಪರ್ಧಿಗಳು ಆಯ್ಕೆಗೊಂಡಿರುತ್ತಾರೆ. ಪ್ರಥಮ ಬಹುಮಾನಿತರಿಗೆ ಹತ್ತು ಸಾವಿರ, ದ್ವಿತೀಯ ಐದು ಸಾವಿರ, ತೃತೀಯ ಮೂರು ಸಾವಿರ ನಗದು, ಪ್ರಶಸ್ತಿ ಪತ್ರ ಹಾಗು ಶಾಶ್ವತ ಫಲಕ ನೀಡಿ ಗೌರವಿಸಲಾಗುವುದು. ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮ ನಿರ್ದೇಶಕರಾದ ಸಂತೋಷ್ ಪಡುಬಿದ್ರಿ ಮತ್ತು ರಚನ್ ಸಾಲ್ಯಾನ್ ಉಪಸ್ಥಿತರಿದ್ದರು.
24 Jul 2025, 11:38 AM
Category: Kaup
Tags: