ಉಚ್ಚಿಲ : ಹಿಂದೂ ರಕ್ಷಾ ವೆಲ್‌ಫೇರ್ ಟ್ರಸ್ಟ್ ಮೂಳೂರು ಹಾಗೂ ಸಂಜೀವ ಆರ್ ಅಮೀನ್ ಸಹಕಾರದೊಂದಿಗೆ ಆಟಿ ಅಮಾವಾಸ್ಯೆಯ ಪ್ರಯುಕ್ತ ಸತತ 10ನೇ ವರ್ಷ ಹಾಳೆ ಮರದ ತೊಗಟೆಯಿಂದ ಮಾಡಿದ ಉಚಿತ ಕಷಾಯ ವಿತರಣಾ ಕಾರ್ಯಕ್ರಮ ಗುರುವಾರ ಮೂಳೂರು
ಸರಕಾರಿ ಸಂಯುಕ್ತ ಶಾಲಾ ಆವರಣದಲ್ಲಿ ಜರಗಿತು.
ಹಿಂದೂ ರಕ್ಷಾ ವೆಲ್‌ಫೇರ್ ಟ್ರಸ್ಟ್ ನ
ಪ್ರಧಾನ ಕಾರ್ಯದರ್ಶಿ ಧೀರೇಶ್ ಡಿ ಪಿ ಮಾತನಾಡಿ, ತುಳುನಾಡಿನ ಆಚರಣೆ, ಆಹಾರ ಪದ್ಧತಿಗಳಲ್ಲಿ ವೈಜ್ಞಾನಿಕ ಅಂಶಗಳು ಅಡಕವಾಗಿದೆ. ಆಟಿ ಅಮವಾಸ್ಯೆಯಂದು ಸೇವಿಸುವ ಆಟಿ ಕಷಾಯವು ಇದರಲ್ಲಿ ಒಂದಾಗಿದೆ. 16 ಯುವಕರು ಸೇರಿ ಈ ಬಾರಿ 50 ಲೀಟರ್ ಕಷಾಯ ತಯಾರಿಸಿ ಸುಮಾರು 850 ಜನರು ಇದರ ಸದುಪಯೋಗ ಪಡೆಯಲು ಅನುಕೂಲವಾಗಿದೆ. ಮೂಳೂರು ಸೇರಿದಂತೆ ಎರ್ಮಾಳಿನಿಂದ ಕೈಪುಂಜಾಲುವರೆಗೆ ಜನರು ಆಗಮಿಸುತ್ತಾರೆ ಎಂದರು.
ಈ ಸಂದರ್ಭ ಟ್ರಸ್ಟಿ ಪ್ರತೀಕ್ ಸುವರ್ಣ, ನಾಗೇಶ್ ಅಮೀನ್, ಸದಸ್ಯರಾದ ದಿನೇಶ್ ಪಾಣರ, ಸುನೀಲ್ ಕರ್ಕೇರ, ಕಾರ್ತಿಕ್ ಸುವರ್ಣ, ಗಗನ್ ಮೆಂಡನ್, ಹವ್ಯಾಸ್ ಪೂಜಾರಿ, ಅವೀಶ್ ಅಂಚನ್, ಶಲಿನ್ ಅಂಚನ್, ತನೀಶ್ ಎಸ್ ಪೂಜಾರಿ, ಪ್ರಜೇಶ್, ಗುರುರಾಜ್ ಪೂಜಾರಿ, ಮನ್ವಿತ್ ಕರ್ಕೇರ, ಜಯೇಶ್ ಸಾಲ್ಯಾನ್ ಉಪಸ್ಥಿತರಿದ್ದರು.