ಕುಂತಳನಗರ : ಬೃಹತ್ ವೈದ್ಯಕೀಯ ಮತ್ತು ರಕ್ತದಾನ ಶಿಬಿರ
Posted On:
25-07-2025 11:07AM
ಕಟಪಾಡಿ : ರೋಟರಿ ಕ್ಲಬ್ ಮಣಿಪುರ,ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ, ರೆಡ್ ಕ್ರಾಸ್ ಕುಂದಾಪುರ, ಬ್ಲಡ್ ಬ್ಯಾಂಕ್ ಮಿಷನ್ ಆಸ್ಪತ್ರೆ
(ಲೋಂಬಾಡ್೯ ಮೆಮೋರಿಯಲ್) ಮತ್ತು ಕುಂತಳನಗರ ಸಂತ ಅಂತೋನಿ ಚರ್ಚ್ ಇದರ ಸಂಯುಕ್ತ ಆಶ್ರಯದಲ್ಲಿ ಚರ್ಚಿನ ಸಭಾಂಗಣದಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಚರ್ಚಿನ ಧರ್ಮಗುರು ಸ್ಟ್ಯಾನ್ಲಿ ಲೋಬೋ, ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ ಉತ್ತಮವಾದ ಆಹಾರ ಮತ್ತು ಜೀವನ ಶೈಲಿಯಿಂದ ರೋಗ ಬರುದನ್ನು ದೂರ ಮಾಡಬಹುದು. ಈ ನಿಟ್ಟಿನಲ್ಲಿ ಈ ರೀತಿ ಶಿಬಿರಗಳಿಂದ ನಮ್ಮ ಆರೋಗ್ಯ ತಪಾಸಣಿ ಮಾಡಲು ಅನುಕೂಲವಾಗುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ ಅಧ್ಯಕ್ಷ ಜಯಕರ ಶೆಟ್ಟಿ, ಚರ್ಚಿನ ಉಪಾಧ್ಯಕ್ಷ ಸ್ಕ್ಯಾನಿ ಡಿಸೋಜಾ, ರೋಟರಿ ಕ್ಲಬ್ ಮಣಿಪುರ ಅಧ್ಯಕ್ಷ ರಾಜೇಶ್ ನಾಯ್ಕ, ಕಾಯ೯ದಶಿ೯ ಎ.ಜಿ. ಡಿಸೋಜ, ವೈದ್ಯರುಗಳಾದ ಡಾ. ಅಜು೯ನ್ ಬಲ್ಲಾಳ, ಡಾ.ಪವಿತ್ರಾ, ಡಾ. ವೈಭವ್ ಜಯಂಟ್ಸ್ ಅಧ್ಯಕ್ಷ ಅಣ್ಣಯ್ಯ ದಾಸ್, ಸುಂದರ ಪೂಜಾರಿ ಮೂಡುಕುಕ್ಕುಡೆ, ಮಾಜಿ ಫೆಡರೇಶನ್ ಅಧ್ಯಕ್ಷ ಮಧುಸೂಧನ್ ಹೇರೂರು ಮುಂತಾದವರಿದ್ದರು.
ರೋಟರಿ ಮಾಜಿ ಅಧ್ಯಕ್ಷ ಚಂದ್ರಶೇಖರ ಸಾಲಿಯಾನ್ ನಿರೂಪಿಸಿದರು. ಆಶಾ ಸಿಕ್ವೇರಾ ವಂದಿಸಿದರು.