ಪಡುಬಿದ್ರಿ ಸಂತೆಕಟ್ಟೆ ಶ್ರೀ ದೈವರಾಜ ಕೋರ್ದಬ್ಬು ದೈವಸ್ಥಾನ : ನೂತನ ಕಾರ್ಯಕಾರಿ ಸಮಿತಿ ಆಯ್ಕೆ New
Posted On:
14-08-2025 02:55PM
ಪಡುಬಿದ್ರಿ : ಸಂತೆಕಟ್ಟೆ ಶ್ರೀ ದೈವರಾಜ ಕೋರ್ದಬ್ಬು ದೈವಸ್ಥಾನ ಬ್ರಹ್ಮಸ್ಥಾನ ರಸ್ತೆ ಪಡುಬಿದ್ರಿ ಇದರ ಕಾರ್ಯಕಾರಿ ಸಮಿತಿಯ ವಾರ್ಷಿಕ ಮಹಾ ಸಭೆಯಲ್ಲಿ ಮುಂದಿನ ಮೂರು ವರ್ಷದ ಅವಧಿಗೆ ನೂತನ ಕಾರ್ಯಕಾರಿ ಸಮಿತಿಗೆ 35 ಸದಸ್ಯರನ್ನು ಆರಿಸಲಾಯಿತು. ನೂತನ ಅಧ್ಯಕ್ಷರಾಗಿ ಶಶಿಕಾಂತ ಪಡುಬಿದ್ರಿ, ಪ್ರಧಾನ ಕಾರ್ಯದರ್ಶಿಯಾಗಿ ರವಿರಾಜ್ ಕೋಟ್ಯಾನ್ ಆಯ್ಕೆಯಾದರು.
ಗೌರವಾಧ್ಯಕ್ಷರಾಗಿ ಬಿ ದಯಾನಂದ ಶೆಟ್ಟಿ, ಜೊತೆ ಕಾರ್ಯದರ್ಶಿಯಾಗಿ ಯತೀಶ್ ದೇವಾಡಿಗ,
ಕೋಶಾಧಿಕಾರಿಯಾಗಿ ಚಿತ್ರಾಕ್ಷಿ ಕೆ ಕೋಟ್ಯಾನ್,
ಜೊತೆ ಕೋಶಾಧಿಕಾರಿಯಾಗಿ ರವೀಂದ್ರ ಸಾಲ್ಯಾನ್ ಆಯ್ಕೆಯಾದರು.
ನೂತನ ಅಧ್ಯಕ್ಷರಾದ ಶಶಿಕಾಂತ ಪಡುಬಿದ್ರಿ ಇವರು ಮುಂದಿನ ಅವಧಿಯ ಅಭಿವೃದ್ಧಿ ಕಾರ್ಯಗಳಿಗೆ ಸರ್ವರ ಸಹಕಾರವನ್ನು ಬಯಸಿದರು.
ದೈವಸ್ಥಾನದ ಅರ್ಚಕರಾದ ಸುರೇಶ್ ಪಡುಬಿದ್ರಿ, ಗುರಿಕಾರರಾದ ವಾಮನ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯದರ್ಶಿ ರವಿರಾಜ್ ಕೋಟ್ಯಾನ್ ಸ್ವಾಗತಿಸಿ, ಗತ ಸಭೆಯ ವರದಿ ವಾಚಿಸಿದರು. ಜೊತೆ ಕೋಶಾಧಿಕಾರಿ ರವೀಂದ್ರ ಸಾಲ್ಯಾನ್ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಜೊತೆ ಕಾರ್ಯದರ್ಶಿ ನಿಖಿಲ್ ಪೂಜಾರಿ ವಂದಿಸಿದರು.