ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ : ಆಟಿಡೊಂಜಿ ದಿನ New
Posted On:
14-08-2025 03:02PM
ಉಡುಪಿ : ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ನೇತೃತ್ವದಲ್ಲಿ ಕುಟುಂಬ ಸದಸ್ಯರೊಂದಿಗೆ ಆಟಿಡೊಂಜಿ ದಿನ ಕಾರ್ಯಕ್ರಮವು ಟೌನ್ ಹಾಲ್ ಉಡುಪಿಯಲ್ಲಿ ಜರಗಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಖ್ಯಾತ ಈಜುಪಟು, ಲಯನ್ಸ್ ಕ್ಲಬ್ ಅಂಬಲಪಾಡಿಯ ಸಕ್ರಿಯ ಸದಸ್ಯ ಲಯನ್ ಗಂಗಾಧರ್ ಜಿ. ಆಟಿದ ಮಹತ್ವದ ಬಗ್ಗೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಪರಿಸರವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಲಯನ್ ಕ್ಲಬ್ ಉದ್ಯಾವರ ಸನ್ ಶೈನ್ ನ ಪ್ರತಿಯೊಬ್ಬ ಸದಸ್ಯರಿಗೂ ಗಿಡ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ವಿವಿಧ ಮನೋರಂಜನ ಸ್ಪರ್ಧೆಗಳು ನಡೆಸಿ ವಿಜೇತರಿಗೆ ಬಹುಮಾನ ನೀಡಲಾಯಿತು. ವೇದಿಕೆಯಲ್ಲಿ ಕ್ಯಾಬಿನೆಟ್ ಸದಸ್ಯರಾದ ಲ. ಜೋನ್ ಫೆರ್ನಾಂಡಿಸ್, ನಿಕಟಪೂರ್ವ ಅಧ್ಯಕ್ಷರಾದ ಲ. ರೋನಾಲ್ಡ್ ರೆಬೆಲ್ಲೋ, ಸ್ಥಾಪಕ ಅಧ್ಯಕ್ಷರಾದ ಲ. ಹೆನ್ರಿ ಡಿಸೋಜಾ, ಕಾರ್ಯದರ್ಶಿ ಲ. ಎಡ್ವಿನ್ ಲುವಿಸ್, ಕೋಶಾಧಿಕಾರಿ ಲ. ಆಲ್ವಿನ್ ಡಿಸೋಜಾ ಉಪಸ್ಥಿತರಿದ್ದರು.
ಅಧ್ಯಕ್ಷ ಲ. ಜೆರಾಲ್ಡ್ ಪಿರೇರ ಸ್ವಾಗತಿಸಿದರು. ಲ. ಉಮೇಶ್ ವಂದಿಸಿದರು. ಲ. ಸ್ಟೀವನ್ ಕುಲಾಸೊ ಕಾರ್ಯಕ್ರಮ ನಿರೂಪಿಸಿದರು.