ಉಡುಪಿ : ಉಡುಪಿ ತಾಲೂಕು ಸ್ತ್ರೀಶಕ್ತಿ ಒಕ್ಕೂಟದ ವಾರ್ಷಿಕ ಮಹಾಸಭೆಯು ಉಡುಪಿ ತಾಲೂಕು ಶಿಶು ಅಭಿವೃದ್ಧಿ ಕೇಂದ್ರದಲ್ಲಿ ನಡೆಯಿತು.
ತಾಲೂಕು ಶಿಶು ಅಭಿವೃದ್ಧಿ ವಿಜಯ ನಾರಾಯಣ್
ನೂತನ ಪಧಾಧಿಕಾರಿಗಳ ಆಯ್ಕೆ ಪ್ರಕಿಯೆಯನ್ನು ನಡೆಸಿಕೊಟ್ಟರು.
ನೂತನ ಅಧ್ಯಕ್ಷೆಯಾಗಿ ಸರಳಾ ಅರ್. ಕಾಂಚನ್ ಆಯ್ಕೆಗೊಂಡರು.
ಉಪಾಧ್ಯಕ್ಷೆಯಾಗಿ ಲಕ್ಷ್ಮಿ ಉಡುಪಿ, ಕಾರ್ಯದರ್ಶಿ ಜಯಂತಿ ಎಸ್ ಪೂಜಾರಿ ಬೆಣ್ಣೆಕುದ್ರು, ಕೋಶಾಧಿಕಾರಿ ವೀಣಾ ನಾಯಕ್ ಹೆರಾಂಜೆ, ಸಮಿತಿ ಸದಸ್ಯರಾಗಿ ಪುಷ್ಪಾ ಕುಂದರ್ ಪಲಿಮಾರ್, ಲತಾ ಎಸ್ ಅಚಾರ್ಯ ಕುತ್ಯಾರ್, ಸುಮಿತ್ರಾ ಬ್ರಹ್ಮಾವರ, ಪ್ರೇಮ ಬ್ರಹ್ಮಾವರ, ಆಶಾ ಶೆಟ್ಟಿ ಉಡುಪಿ, ಅನುಸೂಯೆ ಉಡುಪಿ ಆಯ್ಕೆಗೊಂಡಿರುತ್ತಾರೆ.
ಜಿಲ್ಲಾ ನಿರೂಪಣಾಧಿಕಾರಿ ಅನುರಾಧ ಅದಿಮನೆ, ಹಾಗೂ ಮೇಲ್ವಿಚಾರಕರರು ಉಪಸ್ಥಿತರಿದ್ದರು.