ಕಾಪು : ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಸೈಂಟ್ ಮಿಲಾಗ್ರೀಸ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಲಿ. ಕಾರವಾರ ಇದರ ಶಿರ್ವ ಶಾಖೆಯ ವತಿಯಿಂದ ಮಾನಸದ ವಿಶೇಷ ಚೇತನ ಮಕ್ಕಳಿಗೆ ಅಗತ್ಯ ವಸ್ತುಗಳ ದೇಣಿಗೆ ನೀಡಲಾಯಿತು.
ಮುಖ್ಯ ಅತಿಥಿಯಾಗಿ ಹೋಲಿ ಕ್ರಾಸ್ ಚರ್ಚಿನ ಧರ್ಮಗುರುಗಳು ಹಾಗೂ ಉಡುಪಿ ಧರ್ಮಕ್ಷೇತ್ರದ ನ್ಯಾಯಾಧಿಕರಣದ ಮುಖ್ಯಸ್ಥರಾದಂತಹ ವ. ಫಾ. ಡಾ|ರೋಶನ್ ಡಿಸೋಜಾ, ಶಿರ್ವ ಪೋಲೀಸ್ ಉಪಠಾಣಾ ಅಧಿಕಾರಿಗಳಾದ ಶ್ರೀಧರ್ ಕೆ.ಜೆ, ಶಿರ್ವಾ ಗ್ರಾಮ ಪಂಚಾಯತ್ ಸದಸ್ಯೆ ಹಾಗೂ ಪಾಂಬೂರು ಚರ್ಚ್ ಪಾಲನಾ ಆಯೋಗಗಳ ಸಂಯೋಜಕಿ ವೈಲೆಟ್ ಕ್ಯಾಸ್ತಲಿನೋ, ಬಂಟಕಲ್ಲಿನ ಉದ್ಯಮಿ ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್ ಸುಧನ್ವ ಎಂಟರ್ ಪ್ರೈಸಸ್ ಮಾಲಕಿ ವಿದ್ಯಾ ಎಸ್ ಭಟ್, ಮಾನಸ ಸಂಸ್ಥೆಯ ಅಧ್ಯಕ್ಷರಾದ ಹೆನ್ರಿ ಮಿನೇಜಸ್, ಸ್ಥಾಪಕ ಟ್ರಸ್ಟಿ ಉಡುಪಿ ಡಯಾಸಿಸ್ ಹೆಲ್ತ್ ಕಮಿಷನ್ ನಿರ್ದೇಶಕ, ಹಿರಿಯ ವೈದ್ಯರೂ ಆದ ಡಾ. ಎಡ್ವರ್ಡ್ ಲೋಬೋ, ಮಾನಸ ವಿಶೇಷ ಶಾಲೆಯ ಪ್ರಾಂಶುಪಾಲರಾದ ವ. ಸಿಸ್ಟರ್ ವಿನ್ನಿ ಗೊನ್ಸಾಲ್ವಿಸ್, ಸೈಂಟ್ ಮಿಲಾಗ್ರಿಸ್ ಸಹಕಾರಿಯ ಆಡಳಿತ ಮಂಡಳಿಯ ಪರವಾಗಿ ಉಡುಪಿ ಮಂಗಳೂರು ವಿಭಾಗದ ಅಭಿವೃಧ್ಧಿ ವ್ಯವಸ್ಥಾಪಕರದ ಮನೀಷ್ ಮತ್ತು ಸಾಲ ವಸೂಲಾತಿ ಅಧಿಕಾರಿ ಗೌತಮ್ ರೈ, ಶಿರ್ವ ಶಾಖಾ ವ್ಯವಸ್ಢಾಪಕ ವಿಲ್ಸನ್ ಪ್ರಿತೇಶ್ ಡಿಸೋಜಾ ರವರು ಉಪಸ್ಥಿತರಿದ್ದರು.
ಶಿರ್ವ ಶಾಖಾ ಸಿಬ್ಬಂದಿಗಳು ಹಾಗೂ ಮಾನಸ ಶಾಲೆಯ ಶಿಕ್ಷಕ, ಶಿಕ್ಷಕೇತರ ವರ್ಗದವರು ಕಾರ್ಯಕ್ರಮಕ್ಕೆ ಸಹಕರಿಸಿದರು.
ಮಾನಸ ಸಂಸ್ಥೆಯ ಅಧ್ಯಕ್ಷರಾದ ಹೆನ್ರಿ ಮಿನೇಜಸ್ ಸ್ವಾಗತಿಸಿದರು. ಶಿಕ್ಷಕಿ ಜ್ಯೋತಿ ಆಚಾರ್ಯ ಕಾರ್ಯಕ್ರಮ ನಿರೂಪಿಸಿ, ಪ್ರಾಂಶುಪಾಲೆ ಸಿಸ್ಟರ್ ವಿನ್ನಿ ಗೊನ್ಸಾಲ್ವಿಸ್ ವಂದಿಸಿದರು.