ಸರಕಾರದ ಜಾತಿ ಗಣತಿ ಸಮೀಕ್ಷೆ : ಪೆರ್ಡೂರು ಕುಲಾಲ ಸಂಘದ ಅಧ್ಯಕ್ಷ ಬಿ ಕಾಳು ಕುಲಾಲ್ ರಿಂದ ಸಮುದಾಯದವರಿಗೆ ಮನವಿ
Posted On:
25-09-2025 04:49PM
ಕಾಪು : ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿಗಣತಿ)ಯಲ್ಲಿ ಜಾತಿ ಕಾಲಂನಲ್ಲಿ ಕುಂಬಾರ ಎಂದು ಬರೆಸುವಂತೆ ಪೆರ್ಡೂರು ಕುಲಾಲಸಂಘದ ಅಧ್ಯಕ್ಷರಾದ ಬಿ.ಕಾಳು ಕುಲಾಲ್ ಸಮುದಾಯ ಬಾಂಧವರಿಗೆ ಮನವಿ ಮಾಡಿದ್ದಾರೆ.
ಜಾತಿಗಣತಿ (ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ) ಯಲ್ಲಿ ಕುಲಾಲ ಸಮುದಾಯದ ಪ್ರತಿಯೊಬ್ಬರೂ ತಪ್ಪದೇ ಭಾಗವಹಿಸಬೇಕು ಹಾಗೂ ಜಾತಿ ಬರೆಸುವಾಗ ಜಾತಿ ಕಾಲಂ ನಲ್ಲಿ ಕುಂಬಾರ (ಕೋಡ್ ನಂ.A-0781) ಎಂದು ನಮೂದಿಸುವಂತೆ ಮನವಿ ಮಾಡಲಾಯಿತು.
ಪ್ರಶ್ನೆ 8: ಧರ್ಮ ಕಾಲಂನಲ್ಲಿ – ಹಿಂದೂ,
ಪ್ರಶ್ನೆ 9: ಜಾತಿ ಕಾಲಂನಲ್ಲಿ – ಕುಂಬಾರ (A – 0781)
ಪ್ರಶ್ನೆ 10: ಉಪಜಾತಿ ಕಾಲಂನಲ್ಲಿ – ಇಲ್ಲ,
ಪ್ರಶ್ನೆ 11: ಜಾತಿಗೆ ಇರುವ ಸಮಾನಾರ್ಥಕ (ಪರ್ಯಾಯ) ಹೆಸರು ಕಾಲಂನಲ್ಲಿ – ಆಯಾ ಪ್ರದೇಶದಲ್ಲಿ ನೀವು ಗುರುತಿಸಲ್ಪಟ್ಟಿರುವ ಹೆಸರು (ಉದಾ: ಕುಲಾಲ, ಮೂಲ್ಯ, ಬಂಗೇರ, ಸಾಲಿಯಾನ್ ಹಾಂಡ ಇನ್ನಿತರ ಯಾವುದೇ ಬಳಿಯ ಹೆಸರಿನಲ್ಲಿ ಗುರುತಿಸಿಕೊಂಡಿದ್ದರೂ ಭವಿಷ್ಯದಲ್ಲಿ ಸಮುದಾಯದ ಹಿತಕ್ಕಾಗಿ ಜಾತಿ ಕಾಲಂನಲ್ಲಿ ಕುಂಬಾರ ಎಂದು ನಮೂದಿಸಿ ತೀರಾ ಅತ್ಯಗತ್ಯ)
ಪ್ರಶ್ನೆ 24 (e) ಮೀಸಲಾತಿಯಿಂದ ಪಡೆದ ಇತರೆ ಸೌಲಭ್ಯಗಳು ಕಾಲಂನಲ್ಲಿ – ಸೌಲಭ್ಯಗಳನ್ನು ಪಡೆದಿದ್ದರೆ ಅದನ್ನು ಬರೆಸುವುದು ಇಲ್ಲದಿದ್ದರೆ ಯಾವುದೂ ಇಲ್ಲ ಎಂದು ಬರೆಸುವುದು,
ಪ್ರಶ್ನೆ – 30 ಕುಲಕಸುಬು ಕಾಲಂನಲ್ಲಿ – 53 ರಲ್ಲಿ ನೀಡಿರುವ ಕುಂಬಾರರು (Potters) ಎಂದು
ಪ್ರಶ್ನೆ 32: ನಿಮ್ಮ ಕಸುಬಿನಿಂದ ಬಂದ ಕಾಯಿಲೆಗಳು ಕಾಲಂನಲ್ಲಿ – ಯಾವುದೂ ಇಲ್ಲ ಎಂದು ಬರೆಸುವಂತೆ ಪೆರ್ಡೂರು ಕುಲಾಲ ಸಂಘದ ಅಧ್ಯಕ್ಷರಾದ ಬಿ.ಕಾಳು ಕುಲಾಲ್ ರವರು ಉಡುಪಿ ತಾಲೂಕಿನ ಸಮಸ್ತ ಕುಲಾಲ ಸಮುದಾಯ ಬಾಂಧವರಿಗೆ ಸಂಘದ ಪರವಾಗಿ ಮನವಿ ಮಾಡಿದ್ದಾರೆ.