ಬ್ರಹ್ಮಾವರ : ರುಡ್ ಸೆಟ್ ಆಸರೆಯ ಬಸ್ಸು ತಂಗುದಾಣ ಲೋಕಾರ್ಪಣೆ
ಉಡುಪಿ : ಬ್ರಹ್ಮಾವರ ರುಡ್ ಸೆಟ್ ಆಸರೆ ಸಂಘಟನೆ ಇದರ 20ನೇ ವರ್ಷದ ಸವಿ ನೆನಪಿನಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ರುಡ್ ಸೆಟ್ ಕ್ರಾಸ್ ಬಳಿ ನೂತನವಾಗಿ ನಿರ್ಮಿಸಿರುವ ಬಸ್ಸು ತಂಗುದಾಣದ ಲೋಕಾರ್ಪಣೆಯನ್ನು ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಯಶ್ಪಾಲ್ ಎ ಸುವರ್ಣ ಅವರು ಉದ್ಘಾಟಿಸಿ, ಶುಭ ಹಾರೈಸಿದರು.
ಉಡುಪಿ ಕೆನರಾ ಬ್ಯಾಂಕಿನ ಮಹಾಪ್ರಬಂಧಕರಾಗಿರುವ ಗಂಗಾಧರ್ ಎಚ್ ಕೆ ಅವರು ಬಸ್ಸು ತಂಗುದಾಣದ ಶಿಲಾಫಲಕ ಅನಾವರಣಗೊಳಿಸಿದರು.
ನಂತರ ನಡೆದ ಸಭೆಯಲ್ಲಿ ಮಾತನಾಡಿದ ಕೆನರಾ ಬ್ಯಾಂಕಿನ ಮಹಾಪ್ರಬಂಧಕರಾಗಿರುವ ಗಂಗಾಧರ್ ಎಚ್ ಕೆ, ಆಸರೆ ಸಂಘಟನೆಯ ಈ ಸಮಾಜಮುಖಿ ಕಾರ್ಯ ಮಾದರಿಯಾಗಿದೆ. ಇದೇ ರೀತಿ ಅನೇಕ ಸಮಾಜ ಮುಖಿ ಕಾರ್ಯಗಳನ್ನು ಸಂಘಟನೆಯಿಂದ ನಡೆಸುವಂತಾಗಲಿ. ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳುವ ಸಮಾಜಮುಖಿ ಕಾರ್ಯಕ್ರಮಗಳಿಗೆ ಕೆನರಾ ಬ್ಯಾಂಕ್ ಸದಾ ನಿಮ್ಮ ಜೊತೆಗೆ ಇರುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಸರೆ ಸಂಘಟನೆ ಅಧ್ಯಕ್ಷರಾದ ಹರಿಣಿ ಅಜಯ್ ರಾವ್ ವಹಿಸಿದ್ದರು.
ಈ ಸಂದರ್ಭ ಉಪ ಮಹಾ ಪ್ರಬಂಧಕರಾಗಿರುವ ಮಹಾಮಾಯ ಪ್ರಸಾದ್ ರಾಯ್, ಬ್ರಹ್ಮಾವರ ರುಡ್ ಸೆಟ್ ಸಂಸ್ಥೆಯ ನಿರ್ದೇಶಕರಾಗಿರುವ ಡಾ. ಬೊಮಯ್ಯ ಎಂ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಇದರ ಕ್ಷೇತ್ರ ಯೋಜನಾಧಿಕಾರಿಯವರಾಗಿರುವ ರಮೇಶ್ , ಕರುಣಾಕರ ಜೈನ್ ಹಿರಿಯ ಉಪನ್ಯಾಸಕರು ರುಡ್ ಸೆಟ್ ಸಂಸ್ಥೆ ಸಿದ್ದವನ ಉಜಿರೆ, ಸ್ಥಳದಾನಿಗಳಾದ ಮಂದಾರ ಶೆಟ್ಟಿ, ಬ್ರಹ್ಮಾವರ ರುಡ್ ಸೆಟ್ ಸಂಸ್ಥೆಯ ಉಪನ್ಯಾಸಕರಾಗಿರುವ ಸಂತೋಷ್ ಶೆಟ್ಟಿ ಹಾಗೂ ಚೈತ್ರ , ಕೆನರಾ ಬ್ಯಾಂಕ್ ವಾರಂಬಳ್ಳಿ ಶಾಖೆಯ ಅಮೀತ್, ಕೆನರಾ ಬ್ಯಾಂಕಿನ ಅಜೇಯ್, ಆಸರೆಯ ಕೋಶಾಧಿಕಾರಿ ವೆಂಕಟೇಶ್ ನಾಯ್ಕ , ಉಪಾಧ್ಯಕ್ಷರಾದ ರಾಜಲಕ್ಷ್ಮಿ, ಸಂಘಟನಾ ಕಾರ್ಯದರ್ಶಿ ಉಮೇಶ್ ನಾಯಿರಿ, ಕಮಲ ಕೆ.ಸಿ ಅಮಿನ್, ಗೌರವ ಶಿಕ್ಷಕಿ ಸುಮತಿ ಸುವರ್ಣ, ಮಾಜಿ ಅಧ್ಯಕ್ಷರಾದ ಕಿಶ್ವರಿ ಜಹಾನ್ ಹಾಗೂ ಶಕೀಲಾ ಹೆಗ್ಡೆ, ಪಧಾಧಿಕಾರಿಗಳಾದ ಉಮೇಶ್ ಆಲ್ತಾರು, ಪ್ರಶಾಂತ್ ಕಟಪಾಡಿ, ನಾಗರತ್ನ ಆಚಾರ್ಯ, ಸುಮಂಗಲ ಅಂಬಾಗಿಲು, ಗಂಗಾಧರ ಆಚಾರ್ಯ, ರಾಮಚಂದ್ರ ಆಚಾರ್ಯ, ಕಚೇರಿ ಸಹಾಯಕರಾದ ರವಿ ಸಾಲಿಯಾನ್, ಶಾಂತಪ್ಪ, ಪೃಥ್ವಿರಾಜ್, ಅರುಣ್, ಸಂತೋಷ್, ಆಸರೆ ಸದಸ್ಯರಾದ ಪ್ರವೀಣ್ ಮಲ್ಪೆ, ರಾಗಿಣಿ ಚೆರ್ಕಾಡಿ, ವಿಶ್ವಾಸ್ ಕಾಂಚನ್, ಶಶಿಕಲಾ ದೇವಾಡಿಗ, ಸುಗುಣ ಆಚಾರ್ಯ, ಲೇಖಾರಾಜ್, ಶಿಕ್ಷಕಿ ವೀಣಾ, ವಿದ್ಯಾ, ಪ್ರಕಾಶ್ ಆಚಾರ್ಯ, ಸುಜ್ಯೋತಿ ಅಂಬಲಪಾಡಿ, ಮನೋರಮ ಶೆಟ್ಟಿ, ಯೋಗ ಶಿಕ್ಷಕಿ ಪ್ರಿಯಾಂಕ, ವಿಜಯ ಲಕ್ಷ್ಮಿ, ಭರತ್ ಅಚಾರ್ಯ ಪಂದುಬೆಟ್ಟು, ದಿವ್ಯಜ್ಯೋತಿ ರಾಧಾಕೃಷ್ಣ ಆಚಾರ್ಯ, ಆಶಾ ಪ್ರಾಣೇಶ್, ಸುಮತಿ, ಮಹೇಶ್ ಅಲ್ತಾರು, ರತ್ನಾಕರ ಮೊಗವೀರ, ಹಾಗೂ ರುಡ್ ಸೆಟ್ ನ ವಿದ್ಯಾರ್ಥಿಗಳು, ಆಸರೆ ಸಂಘಟನೆಯ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.
ಆಸರೆಯ ಮಾಜಿ ಅಧ್ಯಕ್ಷರಾದ ಕೆ.ಸಿ ಅಮಿನ್ ಸ್ವಾಗತಿಸಿದರು ಹಾಗೂ ಆಸರೆ ಸಂಘಟನೆಯ ಗೌರವಾಧ್ಯಕ್ಷರಾದ ರಾಜೇಶ್ ಡಿ ಬ್ರಹ್ಮಾವರ ಪ್ರಸ್ತಾವನೆಗೈದರು. ಸೂರಜ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಕುಶಕುಮಾರ್ ಬನ್ನಾಡಿ ವಂದಿಸಿದರು
