ಕಾಪು : ನಾಯ್ಕ್ ಟ್ರೋಫಿ ಪಯ್ಯಾರು -2025 ಕ್ರಿಕೆಟ್ ಪಂದ್ಯಕೂಟದ ಸಮಾರೋಪ
Thumbnail
ಕಾಪು : ಗಣೇಶ್ ನಾಯ್ಕ್ ಪೈಯಾರು ಹಾಗೂ ಆರ್ಯನ್ ನಾಯ್ಕ್ ಬೆಳಪು ಪ್ರಾಯೋಜಕತ್ವದ ನಾಯ್ಕ್ ಟ್ರೋಫಿ -2025 ಇದರ ಕ್ರಿಕೆಟ್ ಪಂದ್ಯಕೂಟ ಸಮಾರೋಪಗೊಂಡಿತು. ಪಂದ್ಯಾಕೂಟದಲ್ಲಿ ಗುರುಗಣೇಶ್, ನೇಜಾರು ತಂಡ ಪ್ರಥಮ ಮತ್ತು ಸಹನಾ, ಮಲ್ಲಾರು, ಕಾಪು ದ್ವೀತಿಯ ಹಾಗೂ ಕಟೀಲ್ ಪ್ರೆಂಡ್ಸ್ ತಂಡ ತೃತೀಯ ಬಹುಮಾನವನ್ನು ತನ್ನದಾಗಿಸಿಕೊಂಡರು. ಈ ಸಮಾರಂಭದಲ್ಲಿ ಬೆಳಪು ಗ್ರಾಮ ಪಂಚಾಯತ್ ಅಧ್ಯಕ್ಷರಾದ ದೇವಿಪ್ರಸಾದ್ ಶೆಟ್ಟಿ, ಕಾಪು ತಾಲೂಕು ನಾಯಕ ಸಮಾಜದ ಅಧ್ಯಕ್ಷರಾದ ಎಂ.ನೀಲಾನಂದ ನಾಯಕ ಕಲ್ಯಾ, ಯೋಗೀಶ್ ಶೆಟ್ಟಿ ಬಾಲಾಜಿ ಕಾಪು, ಶ್ರೀ ಮಾಸ್ತಿ ಅಮ್ಮ ದೇವಸ್ಥಾನ ಪೈಯಾರು ಇದರ ಪ್ರದಾನ ಅರ್ಚಕರಾದ ಮಾಧವ ನಾಯ್ಕ್, ಪೈಯಾರು, ಧೂಮವತಿ ದೈವಸ್ಥಾನ ಪೈಯಾರು ಇದರ ಆಡಳಿತ ಮಂಡಳಿಯ ಅಧ್ಯಕ್ಷರಾದ ರೋಹಿತ್ ನಾಯ್ಕ್, ಮಲ್ಲಾರ್, ಮುಸ್ತಾಕ್ ಬೆಳಪು, ಜಾಹೀರ್ ಅಹಮ್ಮದ್ ಬೆಳಪು, ರವಿ ನಾಯ್ಕ್, ನಿತಿನ್ ನಾಯ್ಕ್, ಮಟ್ಟಾರ್. ವಸಂತ ನಾಯ್ಕ್, ಪೈಯಾರು, ಚಂದ್ರಶೇಖರ ನಾಯ್ಕ್, ಬೆಳಪು, ನಿತ್ಯಾನಂದ ಆರ್ ಶೆಟ್ಟಿ, ಪ್ರವೀಣ್ ಕುಮಾರ್ ಗುರ್ಮೆ, ದಿವಾಕರ ಡಿ ಶೆಟ್ಟಿ ಕಳತೂರು, ಶಶಿಕಾಂತ್ ಆಚಾರ್ಯ, ಕಳತೂರು, ರಾಜೇಶ್ ನಾಯ್ಕ್ ಮಟ್ಟಾರ್, ದಿನೇಶ್ ನಾಯ್ಕ್ ಮಟ್ಟಾರ್, ದೇವೇಂದ್ರ ನಾಯ್ಕ್ ಮಲ್ಲಾರ್, ಸ್ಟಾನ್ಲಿ ಕೊಡ್ದ ಸದಸ್ಯರು ಗ್ರಾಮ ಪಂಚಾಯತ್ ಕುತ್ಯಾರ್, ರವಿ ನಾಯ್ಕ್, ಮಜೂರು, ಕಮಲಾಕ್ಷ ಹಾಗೂ ಸದಾನಂದ ನಾಯ್ಕ್ ಉಪಸ್ಥಿತರಿದ್ದರು.
Additional image
15 Oct 2025, 05:04 AM
Category: Kaup
Tags: