ಕಾಪು : ಇಗ್ನೇಷಿಯಸ್ ಮೆಂಡೋನ್ಸ ಇವರಿಗೆ ಸಂತಾಪ ಸೂಚಕ ಸಭೆ
ಕಾಪು : ಮಲಂಗೋಳಿ ನಿವಾಸಿ ಕಳತ್ತೂರು ವಿನ್ಸೆಂಟ್ ಪಾವಲೇ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಇಗ್ನೇಷಿಯಸ್ ಮೆಂಡೋನ್ಸ ನಿಧನರಾಗಿದ್ದು, ಇವರ ಸಂತಾಪ ಸೂಚಕ ಸಭೆಯನ್ನು ಕಳತ್ತೂರು ಇಗರ್ಜಿ ವಠಾರದಲ್ಲಿ ನಡೆಯಿತು.
ಹಲವಾರು ನಾಗರಿಕರು ಇವರ ಗುಣಗಾನ ಮಾಡಿದರು.
ಈಗರ್ಜಿಯ ಧರ್ಮಗುರು ಪ್ರಾನ್ಸಿಸ್ ಲುವಿಸ್, ಜನಸಂಪರ್ಕ ಜನ ಸೇವಾ ವೇದಿಕೆ ಅಧ್ಯಕ್ಷರಾದ ದಿವಾಕರ ಬಿ ಶೆಟ್ಟಿ, ಗ್ಯಾರಂಟಿ ಸಮಿತಿಯ ಸದಸ್ಯರಾದ ರಾಜೇಶ್ ಕುಲಾಲ್, ಕಾಂಗ್ರೆಸ್ ನಾಯಕರಾದ ಮೊಹಮದ್ ಫಾರೂಕ್ ಚಂದ್ರನಗರ, ಕಾಂಗ್ರೆಸ್ ನಾಯಕರಾದ ಜಾನ್ಸನ್ ಕರ್ಕಡ, ಪಂಚಾಯತ್ ಸದಸ್ಯರಾದ ಕೃಷ್ಣ ಕುಲಾಲ್ ರೋಷನ್ ಕ್ಯಾಸ್ಟಾಲಿನ್, ಐರಿನ್ ತಾವ್ರೋ ,ಆಲ್ಬರ್ಟ್ ಮೆಂಡೋನ್ಸ, ಫೆಡ್ರಿಕ್ ತೌರೋ ಗಿಳ್ಬೇರ್ಟ್ ನಜರಾತ್, ರಿಚಾರ್ಡ್ ಲೋಬೋ, ಸಾಹಿತಿ ದಯಾನಂದ ಶೆಟ್ಟಿ ದೆಂದೂರು, ಕಳತ್ತೂರು ಗ್ರಾಮದ ಸಾರ್ವಜನಿಕರು ಉಪಸ್ಥಿತರಿದ್ದರು.
