ಕೆ ಕೆ ಫ್ರೆಂಡ್ಸ್ ಕಡಂಬು, ಶಿರ್ವ : ದೀಪಾವಳಿ ಸಂಭ್ರಮ ; ಕಣ್ಮನ ಸೆಳೆದ ಬೃಹತ್ ಗೂಡುದೀಪ
ಶಿರ್ವ : ಇಲ್ಲಿನ ಕೆ ಕೆ ಫ್ರೆಂಡ್ಸ್ ಕಡಂಬು ಇದರ ವತಿಯಿಂದ ದೀಪಾವಳಿಯ ಪ್ರಯುಕ್ತ ಬೃಹತ್ ಗಾತ್ರದ ಗೂಡುದೀಪವನ್ನು ಕಡಂಬು ಮೈದಾನದಲ್ಲಿ ಅಳವಡಿಸಿ ದೀಪಾವಳಿ ಆಚರಿಸಲಾಯಿತು.
ಗೂಡುದೀಪವು ಸುಮಾರು 9 ಫೀಟ್ ಎತ್ತರ ಮತ್ತು 5 ಫೀಟ್ ಅಗಲದೊಂದಿಗೆ ಕಡಂಬು ಮೈದಾನದಲ್ಲಿ ರಾರಾಜಿಸುತ್ತಿದೆ. ಮೈದಾನದಲ್ಲಿ ಮಾಡಿದ ವಿದ್ಯುದೀಪಾಲಂಕಾರವು ನೋಡಗರನ್ನು ಸೆಳೆಯುತ್ತಿದೆ.
ಕೆ ಕೆ ಫ್ರೆಂಡ್ಸ್ ಇದರ ಎಲ್ಲಾ ಸದಸ್ಯರು ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು.
