ವಿಶ್ವ ಹಿಂದೂ ಪರಿಷದ್ ಬಜರಂಗದಳ ಮಾತೃಶಕ್ತಿ ದುರ್ಗಾವಾಹಿನಿ ಮಟ್ಟಾರು : ಗ್ರಾಮೀಣ ಕ್ರೀಡಾಕೂಟ
ಕಾಪು : ವಿಶ್ವ ಹಿಂದೂ ಪರಿಷದ್ ಬಜರಂಗದಳ ಮಾತೃಶಕ್ತಿ ದುರ್ಗಾವಾಹಿನಿ ಮಟ್ಟಾರು ನೇತೃತ್ವದಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ನಡೆಯುವ 13 ನೇ ವರ್ಷದ ಸಾರ್ವಜನಿಕ ಗೋಪೂಜಾ ಉತ್ಸವದ ಪ್ರಯುಕ್ತ ನಡೆದ ಗ್ರಾಮೀಣ ಕ್ರೀಡಾಕೂಟವನ್ನು ಶಿರ್ವ ನಡಿಬೆಟ್ಟು ಬಳಿಯ ಕೃಷಿಕರಾದ ಶ್ರೀನಿವಾಸ ಆಚಾರ್ಯ ಉದ್ಘಾಟಿಸಿದರು.
ಸಭಾಧ್ಯಕ್ಷತೆಯನ್ನು ವಿಶ್ವ ಹಿಂದೂ ಪರಿಷದ್ ಮಟ್ಟಾರು ಘಟಕದ ಅಧ್ಯಕ್ಷರಾದ ಜಗದೀಶ ಆಚಾರ್ಯ ವಹಿಸಿದ್ದರು.
ಶಿರ್ವ ಮೂಡುಮಟ್ಟಾರು ಅಂಗನವಾಡಿ ಶಿಕ್ಷಕಿ ಸೌಮ್ಯಾ ಪ್ರಶಾಂತ ಆಚಾರ್ಯ, ಹಿರಿಯರಾದ ಕೃಷ್ಣ ನಾಯಕ್ ಪಾಂಜಗುಡ್ಡೆ, ಅಯ್ಯಪ್ಪ ಭಕ್ತವೃಂದ ಮಾಣಿಬೆಟ್ಟು ಮಟ್ಟಾರು ಅಧ್ಯಕ್ಷರಾದ ಪ್ರಕಾಶ್ ಶೆಟ್ಟಿ, ವಿಶ್ವ ಹಿಂದೂ ಪರಿಷದ್ ಉಡುಪಿ ಜಿಲ್ಲಾ ಪ್ರಚಾರ ಪ್ರಸಾರ ಪ್ರಮುಖ್ ಜಯಪ್ರಕಾಶ್ ಪ್ರಭು, ವಿಶ್ವ ಹಿಂದೂ ಪರಿಷದ್ ಉಡುಪಿ ಜಿಲ್ಲಾ ಬಾಲಸಂಸ್ಕಾರ ಪ್ರಮುಖ್ ಉಷಾ ಪಾಟ್ಕರ್, ಮಾತೃಶಕ್ತಿ ಮಟ್ಟಾರು ಘಟಕ ಪ್ರಮುಖ್ ಸುಮತಿ ಸಾಲ್ಯಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರಂಜಿತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು. ನಂತರ ವಿವಿಧ ವಿಭಾಗಗಳಲ್ಲಿ ಕ್ರೀಡಾಕೂಟ ಜರಗಿತು.
