ಹೆಜಮಾಡಿಯಲ್ಲಿ ನ.15 ರಂದು ಜರಗಲಿರುವ ಕಾಪು ತಾ| 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ
ಪಡುಬಿದ್ರಿ : ಕಾಪು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಇದರ ವತಿಯಿಂದ ನ.15ರಂದು ಹೆಜಮಾಡಿ ಬಿಲ್ಲವರ ಸಂಘದ ಸಭಾಭವನದಲ್ಲಿ ಹಿರಿಯ ಸಾಹಿತಿ ಫಕೀರ್ ಮುಹಮ್ಮದ್ ಕಟ್ಪಾಡಿ ಸರ್ವಾಧ್ಯಕ್ಷತೆಯಲ್ಲಿ ಜರಗಲಿರುವ 7 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆಯು ಹೆಜಮಾಡಿ ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಜರಗಿತು.
ಕ್ಷೇತ್ರದ ಅರ್ಚಕರಾದ ಶ್ರೀನಿವಾಸ್ ಆಚಾರ್ಯರವರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.
ಉಡುಪಿ ಜಿಲ್ಲಾ ಕ.ಸಾ.ಪ. ವತಿಯಿಂದ ಸಮ್ಮೇಳನದ ಕಾರ್ಯಾಧ್ಯಕ್ಷರಾದ ದಯಾನಂದ ಹೆಜಮಾಡಿ ಮತ್ತು ದೇವಳದ ಅರ್ಚಕರನ್ನು ಗೌರವಿಸಲಾಯಿತು.
ಈ ಸಂದರ್ಭ ಹೆಜಮಾಡಿ ಗ್ರಾ.ಪಂ.ಅಧ್ಯಕ್ಷರಾದ ರೇಷ್ಮಾ ಎ.ಮೆಂಡನ್, ಕಾಪು ತಾಲ್ಲೂಕು ಕ.ಸಾ.ಪ. ಅಧ್ಯಕ್ಷರಾದ ಬಿ.ಪುಂಡಲೀಕ ಮರಾಠೆ, ಉಡುಪಿ ಜಿಲ್ಲಾ ಕ.ಸಾ.ಪ. ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ನರಸಿಂಹ ಮೂರ್ತಿ ರಾವ್, ಸಮ್ಮೇಳನದ ಕಾರ್ಯಾಧ್ಯಕ್ಷರಾದ ದಯಾನಂದ ಹೆಜಮಾಡಿ, ಉಪಾಧ್ಯಕ್ಷರುಗಳಾದ ಸಂಜೀವ ಟಿ., ಹರೀಶ್ ಕುಮಾರ್ ಹೆಜಮಾಡಿ, ಪ್ರಧಾನ ಕಾರ್ಯದರ್ಶಿ ಪ್ರಾಣೇಶ್ ಹೆಜಮಾಡಿ, ಜೊತೆ ಕಾರ್ಯದರ್ಶಿ ಪವಿತ್ರ ಗಿರೀಶ್, ಕಾಪು ಕ.ಸಾ.ಪ. ಗೌರವ ಕಾರ್ಯದರ್ಶಿ ಅಶ್ವಿನ್ ಲಾರೆನ್ಸ್, ಕಾಪು ಕ.ಸಾ.ಪ. ಸಮಿತಿಯ ವಿದ್ಯಾ ಅಮ್ಮಣ್ಣಾಯ, ಮಧುಕರ್ ಎಸ್ ಯು ಕಲ್ಯ, ದೇವದಾಸ್ ಪಾಟ್ಕರ್, ದೀಪಕ್ ಬೀರ, ಸಮ್ಮೇಳನದ ಸಮಿತಿಯ ಭರತ್ ಕಾಂಚನ್, ಸನಾ ಇಬ್ರಾಹಿಂ, ದೀಪಕ್ ಕೋಟ್ಯಾನ್, ಚಂದ್ರಹಾಸ್ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
