ನ. 23 ರಂದು ಮಂಗಳೂರಿನ ಮಂಗಳಾದೇವಿಯಲ್ಲಿ ಭವ್ಯ ಕುಲಾಲ ಭವನ ಉದ್ಘಾಟನೆ
ಮಂಗಳೂರು : ಕುಲಾಲ ಸಂಘ ಮುಂಬಯಿ (ರಿ.) ಇದರ ಬಹು ಕೋಟಿ ವೆಚ್ಚದ ನೂತನ ಕುಲಾಲ ಭವನ ಮಂಗಳೂರಿನಲ್ಲಿ
ನವೆಂಬರ್ 23ರಂದು ಮಂಗಳಾದೇವಿ ದೇವಸ್ಥಾನ ಬಳಿ ಅದ್ದೂರಿಯಾಗಿ ಲೋಕಾರ್ಪಣೆಗೊಳ್ಳಲಿದೆ.
ನ.21 ರಂದು ಸಂಜೆ 6ರಿಂದ ವಾಸ್ತು ಪೂಜೆ, ಬಲಿ ಪೂಜೆ ಹಾಗೂ ಸುದರ್ಶನ ಹೋಮ
ನ. 22ರಂದು ಬೆಳಿಗ್ಗೆ 9ರಿಂದ ಗಣಹೋಮ, 11.30ರಿಂದ ಸತ್ಯನಾರಾಯಣ ಪೂಜೆ ,
ನವೆಂಬರ್ 23ರಂದು ಬೆಳಿಗ್ಗೆ 8.30ರಿಂದ ಮಂಗಳಾದೇವಿ ದೇವಸ್ಥಾನದಿಂದ ಶೋಭಾಯಾತ್ರೆ ಹೊರಟು
ಒಡಿಯೂರು ಶ್ರೀ ಹಾಗೂ ಮಾಣಿಲ ಶ್ರೀಗಳ ಶುಭಾಶೀರ್ವಾದದೊಂದಿಗೆ
9.30ಕ್ಕೆ ಕುಲಾಲ ಭವನದ ಉದ್ಘಾಟನೆಯಾಗಲಿದೆ.
ಇದರೊಂದಿಗೆ ಶ್ರೀಮತಿ ಸುಮಿತ್ರ ರಾಜು ಸಾಲ್ಯಾನ್ ಆಡಿಟೋರಿಯಂ, ಶ್ರೀಮತಿ ಯಶೋದಾ ಬಾಬು ಸಾಲ್ಯಾನ್ ಬಂಟ್ವಾಳ ವೇದಿಕೆ, ಶ್ರೀಮತಿ ಸರಸ್ವತಿ ವಿಶ್ವನಾಥ ಬಂಗೇರ ಕುಳಾಯಿ (ಬಾಲ್ಕನಿ), ಶ್ರೀಮತಿ ನಮೃತಾ ಜಗದೀಶ್ ಬಂಜನ್ ಬ್ಯಾಂಕ್ವೆಟ್ ಹಾಲ್
ಶ್ರೀಮತಿ ಸಾವಿತ್ರಿ ಪಿ.ಕೆ.ಸಾಲ್ಯಾನ್ ವೇದಿಕೆ ಹಾಗೂ ಶ್ರೀಮತಿ ವಸಂತಿ ಸದಾಶಿವ ಬಂಜನ್ ಪುಣೆ ಆಡಳಿತ ಕಚೇರಿ ಹಾಗೂ ಡಾ. ಸುರೇಖಾ ಆರ್ ಕುಲಾಲ್ ಮುಂಬಯಿ ಆಡಳಿತ ಕಚೇರಿ ಉದ್ಘಾಟನೆಗೊಳ್ಳಲಿದೆ.
ಮಧ್ಯಾಹ್ನ 1.30ರಿಂದ 2.30ರವರೆಗೆ ಮನೋರಂಜನಾ ಕಾರ್ಯಕ್ರಮ, ಸಂಜೆ 3ರಿಂದ ಗೌರವ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮಕ್ಕೆ ವಿವಿಧ ಕ್ಷೇತ್ರದ ಗಣ್ಯರು, ದೇಶ ವಿದೇಶದ ಕುಲಾಲ ಸಮುದಾಯದ ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.
