ಕಾಪು : ಯುವ ಉದ್ಯಮಿ ಹರೀಶ್ ಕಮಲಾಕ್ಷ ನಾಯಕ್ ರಿಗೆ ಅತ್ಯುತ್ತಮ ಉದ್ಯಮಿ ಪ್ರಶಸ್ತಿ
ಕಾಪು : ಕೌನ್ಸಿಲ್ ಆಫ್ ಸ್ಟೇಟ್ ಇಂಡಸ್ಟ್ರಿಯಲ್ ಡೆವಲಪ್ ಮೆಂಟ್ ಆ್ಯಂಡ್ ಇನ್ವೆಸ್ಟ್‌ಮೆಂಟ್ ಕಾರ್ಪೋರೇಶನ್ಸ್ ಆಫ್ ಇಂಡಿಯಾ (COSIDICI) ವತಿಯಿಂದ ಪ್ರತಿ ವರ್ಷ ನೀಡಲಾಗುವ 11 ನೇ ರಾಷ್ಟ್ರೀಯ 'ಅತ್ಯುತ್ತಮ ಉದ್ಯಮಿ' ಪ್ರಶಸ್ತಿಗೆ ಕಾಪುವಿನ ಯುವ ಉದ್ಯಮಿ ಹರೀಶ್ ಕಮಲಾಕ್ಷ ನಾಯಕ್ ಆಯ್ಕೆಯಾಗಿದ್ದಾರೆ.
ಎಂ.ಎಸ್.ಎಂ.ಇ. ಕ್ಷೇತ್ರದಲ್ಲಿ ಶ್ರೇಷ್ಠ ಸಾಧನೆ, ನವೀನತೆ ಹಾಗೂ ಉದ್ಯಮ ಶೀಲತೆಯನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸುವ ಉದ್ದೇಶದಿಂದ ದೇಶದ ವಿವಿಧ ರಾಜ್ಯಗಳ ಉದ್ಯಮಿಗಳಿಗೆ ನೀಡ ಲಾಗುವ ಈ ರಾಷ್ಟ್ರೀಯ ಪ್ರಶಸ್ತಿ ಪ್ರಧಾನ ಸಮಾರಂಭವು ಡಿ. 5ರಂದು ವಿಶಾಖಪಟ್ಟಣದಲ್ಲಿ ನಡೆ ಯಲಿದೆ.
ಕರ್ನಾಟಕ ರಾಜ್ಯ ಹಣಕಾಸು ನಿಗಮ ಬೆಂಗಳೂರು ಇವರ ಶಿಫಾರಸ್ಸಿನ ಮೇರೆಗೆ ಹರೀಶ್ ನಾಯಕ್ ಅವರನ್ನು ರಾಷ್ಟ್ರೀಯ ಮಟ್ಟದ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಸಿಒಎಸ್‌ಐಡಿಐಸಿಐ ಆಯೋಜನಾ ಸಮಿತಿಯು ಅನುಮೋದಿಸಿದೆ. ಹರೀಶ್ ನಾಯಕ್ ಸಹಿತ ರಾಜ್ಯದ ಐದು ಮಂದಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಕೌನ್ಸಿಲ್ ಆಫ್ ಸ್ಟೇಟ್ ಇಂಡಸ್ಟ್ರಿಯಲ್ ಡೆವಲಪ್ ಮೆಂಟ್ ಆ್ಯಂಡ್ ಇನ್ವೆಸ್ಟ್‌ಮೆಂಟ್ ಕಾರ್ಪೋರೇಶನ್ಸ್ ಆಫ್ ಇಂಡಿಯಾ ಸಂಸ್ಥೆಯ ಮಹಾನಿರ್ದೇಶಕ ಹನ್ಸ್ ರಾಜ್ ವರ್ಮಾ ಮಾಹಿತಿ ನೀಡಿದ್ದಾರೆ.
