ಕಾಪು : ಕೌನ್ಸಿಲ್ ಆಫ್ ಸ್ಟೇಟ್ ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಅಂಡ್ ಇನ್ವೆಸ್ಟ್ಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ ಗೋಲ್ಡನ್ ಲೆಗೆಸಿ ಆಫ್ ಎಕ್ಸಲೆನ್ಸ್ (COSIDICI) ವತಿಯಿಂದ ಪ್ರತಿ ವರ್ಷ ಪ್ರದಾನವಾಗುವ ಹನ್ನೊಂದನೇ ರಾಷ್ಟ್ರೀಯ ಅತ್ಯುತ್ತಮ ಉದ್ಯಮಿ ಪ್ರಶಸ್ತಿಯನ್ನು ಉಡುಪಿ ಜಿಲ್ಲೆಯ ಕಾಪುವಿನ ಯುವ ಉದ್ಯಮಿ ಕಾಪು ಹರೀಶ್ ಕಮಲಾಕ್ಷ ನಾಯಕ್ ಅವರಿಗೆ ಪ್ರದಾನಿಸಲಾಯಿತು. ಈ ಪ್ರಶಸ್ತಿಯನ್ನು ಆಂಧ್ರಪ್ರದೇಶ ಸರ್ಕಾರದ MSME–SERP (NRI) ಎಂಪವರ್‌ಮೆಂಟ್ ಅಂಡ್ ರಿಲೇಶನ್ಸ್ ಸಚಿವ ಕೊಂಡಪ್ಪಳ್ಳಿ ಶ್ರೀನಿವಾಸ್ ಮತ್ತು ಇಂಡಸ್ಟ್ರೀಸ್, ಕಾಮರ್ಸ್ ಹಾಗೂ ಫುಡ್ ಪ್ರೊಸೆಸಿಂಗ್ ಸಚಿವ ಟಿ. ಜಿ. ಭಾರತ್ ದೆಹಲಿ COSIDICI ಸಂಜೀವ ಶರ್ಮಾರವರು ವಿಶಾಖಪಟ್ಟಣ MRDA ಚಿಲ್ಡ್ರನ್ ಅರೇನಾ ಸಭಾಂಗಣದಲ್ಲಿ ಪ್ರಧಾನಿಸಿದರು. ಕರ್ನಾಟಕ ರಾಜ್ಯದಿಂದ ಆಯ್ಕೆಯಾದ ಐದು ಮಂದಿ ಉದ್ಯಮಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಕಾಪು ಹರೀಶ್ ನಾಯಕ್ ಅವರ ಸಾಧನೆಯನ್ನು ಸಚಿವರು ಅಭಿನಂದಿಸಿ, ಮುಂದೆ ಉದ್ಯಮ ಕ್ಷೇತ್ರದಲ್ಲಿ ಇನ್ನಷ್ಟು ಎತ್ತರಗಳನ್ನು ತಲುಪಿ ಹೆಚ್ಚಿನ ರಾಷ್ಟ್ರ ಮಟ್ಟದ ಗೌರವಗಳನ್ನು ಗಳಿಸುವಂತಾಗಲಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ COSIDICI ಅಧ್ಯಕ್ಷ ಡಾ. ಯುವರಾಜ್ IAS, ಕರ್ನಾಟಕ ರಾಜ್ಯ ಹಣಕಾಸು ಮಹಾಮಂಡಳಿಯ ಆಡಳಿತ ನಿರ್ದೇಶಕ ಡಾ. ಎಂ.ಟಿ. ರೇಜು IAS, ಕೆಎಸ್‌ಎಫ್‌ಸಿ ಜಿಎಮ್ ಮಂಜುನಾಥ್, ಆಂಧ್ರ ಪೆಟ್ರೋ ಕೆಮಿಕಲ್ ನ ಪಾರ್ಥ ಸಾರಥಿ ಹಾಗೂ ಅನುಪೂರ್ವಿ ಸಮೂಹ ಸಂಸ್ಥೆಯ ಪ್ರವರ್ತಕಿ ಮತ್ತು ಪೂರ್ವಿ ವೆಂಚರ್ಸ್‌ನ ಮಾಲಕಿ ಪೂರ್ವಿ ನಾಯಕ್ ಕಾಪು ಉಪಸ್ಥಿತರಿದ್ದರು.
