ಕಾಪು ವಿದ್ಯಾನಿಕೇತನ್ ಪಬ್ಲಿಕ್ ಶಾಲೆ : ಉಡುಪಿ ಜಿಲ್ಲಾ ಮಟ್ಟದ ವಿದ್ಯಾ ಕಾಸ್ಟ್ಯುಮ್ ಗಾಲ ಛದ್ಮವೇಷ ಸ್ಪರ್ಧೆ
Thumbnail

ಕಾಪು : ಶಿಕ್ಷಣವು ವಾಣಿಜ್ಯೀಕರಣವಾಗುತ್ತಿರುವ ಸಂದರ್ಭದಲ್ಲಿ  ಮಕ್ಕಳ ಪಾಠದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೆ ಗಮನವಹಿಸಿ ಉತ್ತಮ ವ್ಯಕ್ತಿತ್ವ ರೂಪುಗೊಳ್ಳಲು ಶ್ರಮವಹಿಸಬೇಕಾಗಿದೆ. ರ‍್ಯಾಂಕ್ ಮಾನದಂಡವಲ್ಲ. ಶಿಕ್ಷಣದೊಂದಿಗೆ ವರ್ತನೆ, ಶಿಸ್ತು ಮುಖ್ಯ ಎಂದು ನ್ಯಾಯವಾದಿ ಉಮೇಶ್ ಶೆಟ್ಟಿ ಕಳತ್ತೂರು ಹೇಳಿದರು.

ಅವರು ವಿದ್ಯಾನಿಕೇತನ್ ಪಬ್ಲಿಕ್ ಶಾಲೆ ಕಾಪು  ಇಲ್ಲಿ 33ನೇ ಶಾಲಾ ವಾರ್ಷಿಕೋತ್ಸವದ ಪ್ರಯುಕ್ತ ವಿದ್ಯೋತ್ಸವ ಕಾರ್ಯಕ್ರಮದ ಅಂಗವಾಗಿ ಜರಗಿದ ಉಡುಪಿ ಜಿಲ್ಲಾ ಮಟ್ಟದ ವಿದ್ಯಾ ಕಾಸ್ಟ್ಯುಮ್ ಗಾಲ ಛದ್ಮವೇಷ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

ವೈದ್ಯರಾದ ಡಾ. ಅನುಪ್ ಪೂಜಾರಿ ಕಟಪಾಡಿ, ಶಾಲಾ ಹಳೆ ವಿದ್ಯಾರ್ಥಿನಿ ಡಾ.ಸಲ್ವ ಮಾತನಾಡಿದರು. 

ಶಾಲಾ ಸಂಚಾಲಕ ಕೆ.ಪಿ.ಆಚಾರ್ಯ, ಸಹ ಮ್ಯಾನೇಜಿಂಗ್ ಟ್ರಸ್ಟ್ ಶ್ವೇತಾ ಆಚಾರ್ಯ, ಸ್ಪರ್ಧೆಯ ತೀರ್ಪುಗಾರರಾದ ಮನೋಜ್ ಗಣೇಶಪುರ, ಅನ್ವಿತಾ ಕುಲಾಲ್, ಉಪ ಪ್ರಾಂಶುಪಾಲೆ ನಿಶ್ಮಿತ ಸನಿಲ್, ಕ್ಯಾಂಪಸ್ ಮ್ಯಾನೇಜರ್ ರಾಜೇಶ್ ವೈ, ಕಾರ್ಯಕ್ರಮ ಸಂಯೋಜಕರಾದ ಆಶಿತಾ, ಶೋಭ, ಶಾಲಾ ವಿದ್ಯಾರ್ಥಿ ನಾಯಕರುಗಳಾದ ಕೀರ್ತನ್ ಎಂ.ಕೋಟ್ಯಾನ್, ಚೈತ್ರ ಉಪಸ್ಥಿತರಿದ್ದರು.

ಶಾಲೆಯ ಮುಖ್ಯ ಶಿಕ್ಷಕ ಸಾಕ್ಷತ್ ಯು.ಕೆ.,  ಪ್ರಸ್ತಾವಿಸಿದರು. ವಿದ್ಯಾರ್ಥಿನಿಯರಾದ ತನಿಷ್ಕ ಸ್ವಾಗತಿಸಿ, ನಿಧಿ ವಂದಿಸಿದರು. ವಿದ್ಯಾರ್ಥಿನಿ ಫಾತಿಮ ಝೈನಬ್ ಕಾರ್ಯಕ್ರಮ ನಿರೂಪಿಸಿದರು.

20 Dec 2025, 07:26 PM
Category: Kaup
Tags: