ಬಂಟಕಲ್ಲು ಶಾಲಾ ಶತ ಸಂಭ್ರಮ : ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ - ಕ್ರೀಡೋತ್ಸವ ಸಂಪನ್ನ
Thumbnail

ಶಿರ್ವ : ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ಅನುದಾನಿತ ಹಿ.ಪ್ರಾ.ಶಾಲೆಯ ಶತಮಾನೋತ್ಸವ ಸಂಭ್ರಮದ ಪ್ರಯುಕ್ತ  ಶಾಲಾ ಶತಮಾನೋತ್ಸವ ಸಮಿತಿಯ ನೇತೃತ್ವದಲ್ಲಿ  ಶನಿವಾರ "ಶಾಲಾ ಹಳೆವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ- ಕ್ರೀಡೋತ್ಸವ" ಕಾರ್ಯಕ್ರಮ ಶತಮಾನೋತ್ಸವ ವೇದಿಕೆಯಲ್ಲಿ ಉದ್ಘಾಟನೆಗೊಂಡಿತು. ಶಾಲಾ ಹಿರಿಯ ಹಳೆವಿದ್ಯಾರ್ಥಿ,ಉದ್ಯಮಿ ಲೂವಿಸ್ ಮಾರ್ಟಿಸ್ ಬಂಟಕಲ್ಲು ಇವರು ದೀಪ ಪ್ರಜ್ವಲನದ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು.

   ಶಾಲಾ ಆವರಣದ ದ್ವಾರವನ್ನು ದಿ.ವಿಲಿಯಮ್ ಪಿಂಟೊ, ಎಮಿಲಿಯಾ ಪಿಂಟೊ ಸ್ಮರಣಾರ್ಥ ನೀಡಿದ ದಾನಿ ಎವಿಟಾ ಪಿಂಟೊ ಪೊದಮಲೆ ಇವರು ಉದ್ಘಾಟಿಸಿದರು. 

ಶಾಲಾ ಮುಖ್ಯೋಪಾಧ್ಯಾಯರ ನವೀಕೃತ ಕಾರ್ಯಾಲಯವನ್ನು ಶಾಲಾ ಹಳೆವಿದ್ಯಾರ್ಥಿನಿ, ಅನಿವಾಸಿ ಭಾರತೀಯ ವೆರೋನಿಕಾ ಕಸ್ತಲಿನೊ ಉದ್ಘಾಟಿಸಿದರು. ಶಾಲೆ ಹಳೆ ವಿದ್ಯಾರ್ಥಿನಿ ಶಾರದಾ ಶರ್ಮಾ ಬಂಟಕಲ್ಲು ಇವರು ಕ್ರೀಡಾಕೂಟವನ್ನು ಬೆಲೂನುಗಳನ್ನು ಆಕಾಶಕ್ಕೆ ಹಾರಿಸುವ ಮೂಲಕ ಚಾಲನೆ ನೀಡಿದರು.

    ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ದಾನಿಗಳಾದ ಉದ್ಯಮಿ ರಾಮಚಂದ್ರ ನಾಯಕ್ ಪಡುಬೆಳ್ಳೆ, ಶಾಲಾ ಹಳೆವಿದ್ಯಾರ್ಥಿ ಅನಿವಾಸಿ ಉದ್ಯಮಿ ರತ್ನಾಕರ ಶೆಟ್ಟಿ ಮಾಣಿಪಾಡಿ, ಮುಂಬಯಿ ಉದ್ಯಮಿ ಜನಾರ್ದನ ಆಚಾರ್ಯ ಬಂಟಕಲ್ಲು, ನಿವೃತ್ತ ಅಂಚೆ ಸಹಾಯಕ ಭಾಸ್ಕರ ಶೆಟ್ಟಿ ಸಡಂಬೈಲು, ಬಂಟಕಲ್ಲು ದೇವಳದ ಆಡಳಿತ ಮೊಕ್ತೇಸರ ಜಯರಾಮ ಪ್ರಭು ಗಂಪದಬೈಲು, ಬಂಟಕಲ್ಲು ಬಬ್ಬುಸ್ವಾಮಿ ದೈವಸ್ಥಾನದ ಗುರಿಕಾರ ಶಂಕರ ಪದಕಣ್ಣಾಯ, ಶಾಲಾ ಸಂಚಾಲಕ ರಾಮದಾಸ್ ಪ್ರಭು, ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಶಶಿಧರ ವಾಗ್ಲೆ, ಶಾಲಾ ಮುಖ್ಯ ಶಿಕ್ಷಕಿ ಸಂಗೀತಾ ಆರ್ ಪಾಟ್ಕರ್ ಉಪಸ್ಥಿತರಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಮಾಧವ ಕಾಮತ್ ವಹಿಸಿದ್ದರು.

 ಕಾರ್ಯದರ್ಶಿ ಕೆ.ಆರ್.ಪಾಟ್ಕರ್ ಶತಮಾನೋತ್ಸವ ಸಮಿತಿಯ ಆಶಯ, ಈವರೆಗಿನ ಅಭಿವೃದ್ಧಿ ಕಾರ್ಯಗಳು, ಭವಿಷ್ಯದ ಯೋಜನೆಗಳ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.  ಸಮಿತಿಯ ಪದಾಧಿಕಾರಿ ದೇವದಾಸ್ ಪಾಟ್ಕರ್ ಮುದರಂಗಡಿ ನಿರೂಪಿಸಿ, ವಂದಿಸಿದರು. ಶಿಕ್ಷಕಿ ವಿನಯಾ ಆಚಾರ್ಯ ಪ್ರಾರ್ಥಿಸಿದರು.

  ಶಾಲಾ ನಿವೃತ್ತ ಶಿಕ್ಷಕರೊಂದಿಗೆ ಹಳೆವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮದ ವೇದಿಕೆಯಲ್ಲಿ ನಿವೃತ್ತ ಮುಖ್ಯ ಶಿಕ್ಷಕರುಗಳಾದ ಎನ್.ರಾಧಾಕೃಷ್ಣ ಪ್ರಭು, ಜಯಂತಿ,  ಸಹಶಿಕ್ಷಕರುಗಳಾದ ಬಿ.ಪುಂಡಲೀಕ ಮರಾಠೆ, ಸುಬ್ರಹ್ಮಣ್ಯ ನಾಯಕ್, ಹಿಲ್ಡಾ ಸಲ್ಡಾನ್ನ ಭಾಗವಹಿಸಿದ್ದರು. ವಿದ್ಯಾರ್ಥಿಗಳು ಅಂದಿನ ಕಾಲದ ಅವಿಸ್ಮರಣೀಯ ಘಟನೆಗಳನ್ನು ಮೆಲುಕು ಹಾಕಿ ಸಂಭ್ರಮಿಸಿದರು. ಕ್ರೀಡಾಕೂಟದ ನಿರ್ವಹಣೆಯನ್ನು ದೈಹಿಕ ಶಿಕ್ಷಣ ಶಿಕ್ಷಕರಾದ ಪರಶುರಾಮ ಪ್ರಭು ಪಂಜಿಮಾರು ಕೋಟೆ ನೆರವೇರಿಸಿದರು. 

  ಕಾರ್ಯಕ್ರಮದಲ್ಲಿ ವಾರ್ಷಿಕ ಪಬ್ಲಿಕ್ ಪರೀಕ್ಷೆಯಲ್ಲಿ ಶಾಲೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿಗಳನ್ನು ಹಾಗೂ 60 ವರ್ಷ ಮೇಲ್ಪಟ್ಟ ಹಿರಿಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶಾಲಾ ಹಳೆವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

    

20 Dec 2025, 07:42 PM
Category: Kaup
Tags: