ಕರುನಾಡ ಸುವರ್ಣ ರಾಜ್ಯೋತ್ಸವ ಪ್ರಶಸ್ತಿಗೆ ಸಮಾಜ ಸೇವಕ ಡಾ. ಫಾರೂಕ್ ಚಂದ್ರನಗರ ಆಯ್ಕೆ
Thumbnail

ಕಾಪು : ಅನ್ನ ಪೂರ್ಣೇಶ್ವರಿ ಹ್ಯೂಮಾನಿಟಿ ಫೌಂಡೇಶನ್ (ರಿ.) ಹಾಗೂ ವಿಶ್ವಕರ್ಮ ಅಭಿವೃದ್ಧಿ ಫೌಂಡೇಶನ್ (ರಿ.) ಬೆಂಗಳೂರು ವತಿಯಿಂದ ವಿಶ್ವ ಮಾನವ ದಿನಾಚರಣೆಯ ಕಾರ್ಯಕ್ರಮದಲ್ಲಿ ಅತ್ಯುತ್ತಮ ಸಮಾಜ ಸೇವೆಗಾಗಿ ಕೊಡಲ್ಪಡುವ ರಾಜ್ಯ ಮಟ್ಟದ ಕರುನಾಡ ಸುವರ್ಣ ರಾಜ್ಯೋತ್ಸವ ಪ್ರಶಸ್ತಿಗೆ ಕಾಪುವಿನ ಸಮಾಜ ಸೇವಕ ಬಟರ್ ಫ್ಲೈ ಗೆಸ್ಟ್ ಹೌಸ್ & ಪಾರ್ಟಿ ಹಾಲ್ ಇದರ ಆಡಳಿತ ನಿರ್ದೇಶಕರಾದ ಡಾ.ಫಾರೂಕ್ ಚಂದ್ರನಗರ ಆಯ್ಕೆಯಾಗಿದ್ದಾರೆಂದು ಅನ್ನ ಪೂರ್ಣೇಶ್ವರಿ ಹ್ಯೂಮಾನಿಟಿ ಫೌಂಡೇಶನ್ ಅಧ್ಯಕ್ಷರಾದ ಡಾ.ಮಹಾಂತೇಶ್ ಎಸ್ ಕಡಲಗಿ ಹಾಗೂ ವಿಶ್ವಕರ್ಮ ಅಭಿವೃದ್ಧಿ ಫೌಂಡೇಶನ್ ಅಧ್ಯಕ್ಷರಾದ ನಿತ್ಯ ಎಸ್.ಆಚಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಿಸೆಂಬರ್ 28 ರವೀಂದ್ರ ಕಲಾಕ್ಷೇತ್ರ ನಯನ ಸಭಾಂಗಣ ಕನ್ನಡ ಭವನ ಬೆಂಗಳೂರಿನಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

21 Dec 2025, 09:15 AM
Category: Kaup
Tags: #kapu#