ಜ. 3 -10 : 26ನೇ ವರ್ಷದ ಕಳತ್ತೂರು ಕುಕ್ಕುಂಜದ ಅಯ್ಯಪ್ಪ ಶಿಬಿರದ ಕಾರ್ಯಕ್ರಮ
Thumbnail

ಕಾಪು : ತಾಲೂಕಿನ ಕಳತ್ತೂರು ಕುಕ್ಕುಂಜದ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತವೃಂದ (ರಿ.)ಇದರ 26 ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿಯ ಮಹಾಪೂಜೆ ಪ್ರಯುಕ್ತ ಜನವರಿ 3 ರಂದು ಸಂಜೆ 7.30 ಕ್ಕೆ ಶ್ರೀ ಅಯ್ಯಪ್ಪ ಸ್ವಾಮಿಯ ದೀಪೋತ್ಸವ, ಜನವರಿ 10 ರಂದು ಬೆಳಿಗ್ಗೆ 11.30 ಕ್ಕೆ ಸರಿಯಾಗಿ ಶ್ರೀ ಅಯ್ಯಪ್ಪ ಸ್ವಾಮಿಯ ಮಹಾಪೂಜೆ, ಮಧ್ಯಾಹ್ನ 12.30 ರಿಂದ ಮಹಾ ಅನ್ನಸಂತರ್ಪಣೆ  ಹಾಗೂ ಅಂದು ರಾತ್ರಿ  8 ರಿಂದ ಮೆಲೋಡಿ ಮ್ಯೂಸಿಕಲ್ ನಿಟ್ಟೆ  "ಕಲಾರತ್ನ' ಪ್ರವೀಣ್ ಆಚಾರ್ಯ ತಂಡದಿಂದ ಭಕ್ತಿ ಗಾನಮೃತ ಕಾರ್ಯಕ್ರಮ ಜರಗಲಿದೆ.

ಈ ಎಲ್ಲಾ ಕಾರ್ಯಕ್ರಮಕ್ಕೆ ತಾವೆಲ್ಲರೂ ಆಗಮಿಸಿ  ಶ್ರೀ ದೇವರ ಕೃಪೆಗೆ ಪಾತ್ರರಾಗ ಬೇಕಾಗಿ ಅಯ್ಯಪ್ಪ ಭಕ್ತವೃಂದ (ರಿ.)ಕುಕ್ಕುಂಜ  ಪ್ರಕಟಣೆಯಲ್ಲಿ ತಿಳಿಸಿದೆ.

21 Dec 2025, 09:23 AM
Category: Kaup
Tags: