ಕಾಪು ವಿದ್ಯಾನಿಕೇತನ್ ಪಬ್ಲಿಕ್ ಶಾಲೆ : 33ನೇ ಶಾಲಾ ವಾರ್ಷಿಕೋತ್ಸವ ವಿದ್ಯೋತ್ಸವ ಸಂಪನ್ನ
Thumbnail

ಕಲಿಕೆಯಲ್ಲಿ ಜಾತಿ ಮುಖ್ಯವಲ್ಲ. ಗುರುಗಳು ಮುಖ್ಯ : ಚಲನಚಿತ್ರ ನಟ ಅರವಿಂದ ಬೋಳಾರ್ 

ಕಾಪು : ಕಲಿಕೆಯಲ್ಲಿ ಜಾತಿ ಮುಖ್ಯವಲ್ಲ. ಗುರುಗಳು ಮುಖ್ಯ. ಸಣ್ಣವರಿರುವಾಗಲೇ ಪ್ರತಿಭೆಯನ್ನು ಗುರುತಿಸಿ ಪೋಷಿಸಿದ್ದಲ್ಲಿ ದೊಡ್ಡವರಾದಾಗ ಸಾಧಕರಾಗಲು ಸಾಧ್ಯ ಎಂದು ಚಲನಚಿತ್ರ ನಟ ಅರವಿಂದ ಬೋಳಾರ್ ಹೇಳಿದರು‌.
ಅವರು ವಿದ್ಯಾನಿಕೇತನ್ ಪಬ್ಲಿಕ್ ಶಾಲೆ ಕಾಪು  ಇದರ 33ನೇ ಶಾಲಾ ವಾರ್ಷಿಕೋತ್ಸವ  ವಿದ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಶಾಲೆಯ ಶಿಕ್ಷಕರ ಬೈಗುಳವು ಮುಂದೆ ಪ್ರತಿಭಾ ಕಾರ್ಯಕ್ರಮದಲ್ಲಿ ಪ್ರಥಮ ಬಹುಮಾನ ಪಡೆದುಕೊಳ್ಳಲು ಪ್ರೇರೆಪಿಸಿದ ಕ್ಷಣವನ್ನು ನೆನಪಿಸಿಕೊಂಡರು. 

ಶ್ರೀ ಭಗವತಿ ಕ್ಷೇತ್ರ ಸಸಿಹಿತ್ಲು ಇಲ್ಲಿನ ಅನುವಂಶಿಕ ಆಡಳಿತ ಮೊಕ್ತೇಸರರಾದ
ಶ್ರೀನಿವಾಸ ಯಾನೆ ಅಪ್ಪು ಪೂಜಾರಿ ಕಾರ್ಯಕ್ರಮ ಉದ್ಘಾಟಿಸಿ, ಶುಭ ಹಾರೈಸಿದರು.

ನ್ಯಾಯವಾದಿ ಮಟ್ಟಾರು ರತ್ನಾಕರ ಹೆಗ್ಡೆ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಸಂತಸದೊಂದಿಗೆ ಕಲಿಕೆ ಸಾಗಬೇಕು. ಮಕ್ಕಳನ್ನು ಅವಮಾನ ಮಾಡದೆ, ಅವರ ಕಲಿಕೆಗೆ ಪ್ರೋತ್ಸಾಹದಾತರಾಗಬೇಕು.
ಕೆ.ಪಿ ಆಚಾರ್ಯರ ದಿಟ್ಟತನದಿಂದ ಮೂಡಿದ ಸಂಸ್ಥೆ ವಿದ್ಯಾನಿಕೇತನವಾಗಿದೆ.

ವಿದ್ಯಾರತ್ನ ಪ್ರಶಸ್ತಿ/ ಬಹುಮಾನ ವಿತರಣೆ : ಕಾಪುವಿನ ಚಿತ್ರಕಲಾ ಪ್ರತಿಭೆ ಕುಮಾರಿ ರಕ್ಷಾ ಆರ್ ಪೂಜಾರಿಯವರಿಗೆ ವಿದ್ಯಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಲಿಕೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಮಣಿಪಾಲ ಜ್ಞಾನಸುಧ ಕಾಲೇಜಿನ ಪ್ರಾಂಶುಪಾಲರಾದ ಗಣೇಶ್ ಶೆಟ್ಟಿ, ಶ್ರೀ ಗುರು ತಿಲಕನಾಥ ಸ್ವಾಮಿ ಕ್ಷೇತ್ರ ಮುಳಿಹಿತ್ಲು ಇದರ ಆಡಳಿತ ಮೊಕ್ತೇಸರ ಉಮಾನಾಥ ಕಾಪು, ಪತ್ರಕರ್ತರಾದ ರಾಕೇಶ್ ಕುಂಜೂರು, ಹಳೆ ವಿದ್ಯಾರ್ಥಿ ಸಕ್ಷತ್ ಶೆಟ್ಟಿ, ಚಿತ್ರಕಲಾವಿದೆ 
ರಕ್ಷಾ ಆರ್ ಪೂಜಾರಿ, ಸಂಚಾಲಕರಾದ ಕೆ.ಪಿ.ಆಚಾರ್ಯ, ಸಹ ಮ್ಯಾನೇಜಿಂಗ್ ಟ್ರಸ್ಟಿ ಶ್ವೇತಾ ಆಚಾರ್ಯ, ಪ್ರಾಂಶುಪಾಲರಾದ ಸಾಕ್ಷತ್ ಯುಕೆ, ಉಪ ಪ್ರಾಂಶುಪಾಲೆ ನಿಶ್ಮಿತ ಸನಿಲ್, ಕ್ಯಾಂಪಸ್ ಮ್ಯಾನೇಜರ್ ರಾಜೇಶ್ ವೈ, ಕಾರ್ಯಕ್ರಮ ಸಂಚಾಲಕರಾದ ಶೋಭಾ, ಆಶಿತಾ ಉಪಸ್ಥಿತರಿದ್ದರು.

ಆಶಿತಾ ಸ್ವಾಗತಿಸಿದರು. ಪ್ರಾಂಶುಪಾಲರಾದ ಸಾಕ್ಷತ್ ಯುಕೆ ವರದಿ ವಾಚಿಸಿದರು. ಶಿಕ್ಷಕಿಯರಾದ ಶೋಭಾ, ಆಶಿತಾ ಬಹುಮಾನಿತರ ಪಟ್ಟಿ ವಾಚಿಸಿದರು.
ವಿದ್ಯಾರ್ಥಿಗಳಾದ ಸಾತ್ವಿಕಾ ಮತ್ತು ರಾನಿಯಾ ಕಾರ್ಯಕ್ರಮ ನಿರೂಪಿಸಿದರು.

 

 

 

Additional image Additional image
22 Dec 2025, 09:56 AM
Category: Kaup
Tags: